ಬಿಯರ್ ಕುಡಿದು, ಬೆಟ್ಟದಂತ ಹೊಟ್ಟೆ ಬೆಳೆಸಿಕೊಂಡಿದ್ದೀರಾ..? ಎಣ್ಣೆ ಬಿಡದೇ ಹೊಟ್ಟೆ ಕರಗಿಸಲು ಹೀಗೆ ಮಾಡಿ..

Fri, 05 Jul 2024-7:18 pm,

ಮದ್ಯಪಾನ ಮಾಡುವುದರಿಂದ ಮಧುಮೇಹ ಮತ್ತು ಹೃದ್ರೋಗದ ಅಪಾಯ ಹೆಚ್ಚು. ಅಲ್ಲದೆ, ಇದು ಹೊಟ್ಟೆಯ ಸುತ್ತಲೂ ಹೆಚ್ಚುವರಿ ಕೊಬ್ಬು ಸಂಗ್ರಹಗೊಳ್ಳಲು ಕಾರಣವಾಗುತ್ತದೆ. ಈ ಹೊಟ್ಟೆಯನ್ನು ಕಡಿಮೆ ಮಾಡುವುದು ಸುಲಭದ ಕೆಲಸವೂ ಅಲ್ಲ.. ಕುಡಿಯದೇ ಇರುವುದು ನಿಮಗೂ ಆಗಲ್ಲ.. ಹಾಗಿದ್ರೆ ಏನ್‌ ಮಾಡ್ಬೇಕು.. ಇಲ್ಲಿವೆ ಕೆಲವು ಟಿಪ್ಸ್‌..

ನಿತ್ಯ ಮದ್ಯಪಾನ ಮಾಡದಿದ್ದರೂ ಕೆಲವರು ಈವೆಂಟ್ ಅಥವಾ ಗೆಟ್ ಟುಗೆದರ್ ಇಲ್ಲವೇ ಸ್ನೇಹಿತರೊಂದಿಗೆ ಔಟಿಂಗ್‌ಗೆ ಹೋಗುವಾಗ ಆಗಾಗ ಮದ್ಯ ಸೇವಿಸುತ್ತಾರೆ.  ಇನ್ನೂ ಕೆಲವರು ಅದನ್ನೇ ಜೀವನವನ್ನಾಗಿಸಿಕೊಂಡಿರುತ್ತಾರೆ.. ಅಂತಹವರ ಹೊಟ್ಟೆ ಬೆಟ್ಟದಷ್ಟು ಬೆಳೆದಿರುತ್ತದೆ.. ಆ ಹೊಟ್ಟೆಯನ್ನು ಕಡಿಮೆ ಮಾಡಿಕೊಳ್ಳಲು ಆರೋಗ್ಯ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.. 

ಆಲ್ಕೊಹಾಲ್ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ. ವಾರಕ್ಕೊಮ್ಮೆ ಆಲ್ಕೋಹಾಲ್ ಕುಡಿಯಲು ಅಭ್ಯಾಸ ಮಾಡಿ. ಕಡಿಮೆ ಕ್ಯಾಲೋರಿ ಹೊಂದಿರುವ ಆಲ್ಕೋಹಾಲ್ ಅನ್ನು ಮಾತ್ರ ಸೇವಿಸಬೇಕು. ಇಲ್ಲವೆ ದೈನಂದಿನ ಆಹಾರದಲ್ಲಿ ಕೊಬ್ಬು ಕಡಿಮೆ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. 

ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ಬೀಜಗಳನ್ನು ತಿನ್ನಿರಿ. ಸಕ್ಕರೆ ಮತ್ತು ಕ್ಯಾಲೋರಿಗಳು ಹೆಚ್ಚಿರುವ ಆಹಾರಗಳನ್ನು ತಿನ್ನಬೇಡಿ.. ಆಹಾರದಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನಂಶ ತುಂಬಾ ಕಡಿಮೆ ಇರುವಂತೆ ನೋಡಿಕೊಳ್ಳಿ. ಡಿಟಾಕ್ಸ್ ವಾಟರ್, ಹರ್ಬಲ್ ಟೀಗಳಿಂದ ತಯಾರಿಸಿದ ಸ್ಮೂಥಿಗಳು, ಹಣ್ಣುಗಳು ಮತ್ತು ತರಕಾರಿಗಳು ಸೇವಿಸಿ..

ನೀವು ವ್ಯಾಯಾಮ ಮಾಡದಿದ್ದರೆ, ಕೊಬ್ಬು ಕಳೆದುಕೊಳ್ಳುವುದಿಲ್ಲ. ಹಾಗಾಗಿ ಪ್ರತಿದಿನ 30 ನಿಮಿಷಗಳ ಕಾಲ ಯೋಗ ಮಾಡುವುದನ್ನು ರೂಢಿಸಿಕೊಳ್ಳಿ. ಇದು ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ನಿಮ್ಮ ತೂಕವನ್ನೂ ಕಡಿಮೆ ಮಾಡುತ್ತದೆ. ಇದಲ್ಲದೆ, ಇತರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. 

ಹೆಚ್ಚು ಆಲ್ಕೋಹಾಲ್ ಕುಡಿಯುವುದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ. ನಿದ್ರಾಹೀನತೆಯ ಸಮಸ್ಯೆಯ ಜೊತೆಗೆ ಖಿನ್ನತೆಯು ಹೆಚ್ಚಾಗುತ್ತದೆ. ತೂಕ ಹೆಚ್ಚಳಕ್ಕೂ ಕಾರಣವಾಗುತ್ತವೆ. ಹಾಗಾಗಿ ಆಲ್ಕೋಹಾಲ್ ಕಡಿಮೆ ಮಾಡಿ ರಾತ್ರಿ ಚೆನ್ನಾಗಿ ನಿದ್ದೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link