Bollywood: ಇತ್ತ ಹೆಂಡತಿ ಅತ್ತ ಇಬ್ಬರು ನಟಿಯರ ಅಫೇರ್! 2 ಕೋಟಿ‌ ಗಿಫ್ಟ್ʼನಿಂದ ರಿವೀಲ್ ಆದ ಈ ಸ್ಟಾರ್‌ ನಟನ ಸೀಕ್ರೆಟ್ ಸಂಬಂಧ?

Sat, 02 Mar 2024-3:00 pm,

ಸೂಪರ್‌ಸ್ಟಾರ್‌ ಹೃತಿಕ್ ರೋಷನ್ ಸುಮಾರು 14 ವರ್ಷಗಳ ಹಿಂದೆ 2000ದಲ್ಲಿ ತಮ್ಮ ಬಾಲ್ಯದ ಸ್ನೇಹಿತೆಯನ್ನು ವಿವಾಹವಾದರು.‌ 

ಮದುವೆಯಾಗಿದ್ದರೂ ಬೇರೆಯವರನ್ನು ಹೃತಿಕ್ ರೋಷನ್ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಅದು ಇಬ್ಬರು ನಟಿಯರೊಂದಿಗೆ ಹೃತಿಕ್ ರೋಷನ್ ಡೇಟಿಂಗ್ ಮಾಡಲು ಆರಂಭಿಸಿದ್ದರಂತೆ ಎನ್ನಲಾಗಿದೆ.

2010 ರಲ್ಲಿ ಹೃತಿಕ್ ರೋಷನ್ ಸ್ಪ್ಯಾನಿಷ್ ಸುಂದರಿ ಬಾರ್ಬರಾ ಮೋರಿಯ ಜೊತೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಪ್ರೀತಿಸುತ್ತಿದ್ದರು. ಬಾರ್ಬರಾ ಮೋರಿ ಅವರಿಗೆ ಹೃತಿಕ್ ರೋಷನ್ 2 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ವ್ಯಾನಿಟಿ ವ್ಯಾನ್ ಗಿಫ್ಟ್‌ ಕೊಟ್ಟಾಗ ಈ ಸೀಕ್ರೇಟ್‌ ಹೊರಬಿತ್ತು ಎನ್ನಲಾಗಿದೆ. 

ಹೃತಿಕ್ ಬಾಲಿವುಡ್‌ನ ಬ್ಯೂಟಿ ಕ್ವೀನ್ ಕಂಗನಾ ರಣಾವತ್ ಜೊತೆ ಸಹ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಏಕಕಾಲದಲ್ಲಿ ಇಬ್ಬಿಬ್ಬರ ಜೊತೆ ಹೃತಿಕ್‌ ಸಂಬಂಧ ಹೊಂದಿದ್ದರು. ಇವರಿಬ್ಬರನ್ನು ಬಿಟ್ಟು ಪತ್ನಿಯ ಜೊತೆಗೂ ಇದ್ದರು. 

ಹೃತಿಕ್ ಜೊತೆಗೆ ಕಂಗನಾ ಸಂಬಂಧದ ಬಗ್ಗೆ ತಿಳಿದ ಸುಸೇನ್ ಅಸಮಾಧಾನಗೊಂಡರು. ಹೃತಿಕ್ ಮತ್ತು ಬಾರ್ಬರಾ ಸಂಬಂಧದ ಬಗ್ಗೆ ತಿಳಿದಾಗಲಂತೂ ಸುಸೇನ್ ಹೃದಯ ಒಡಿದು ಹೋಯಿತು ಎನ್ನಲಾಗುತ್ತದೆ. ನವೆಂಬರ್ 2014 ರಲ್ಲಿ ಹೃತಿಕ್ ಮತ್ತು ಸುಸೇನ್ ವಿಚ್ಛೇದನ ಪಡೆದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link