Bizarre: ಪತಿ ಕೊರಳಲ್ಲಿ ಚೈನ್ ಕಟ್ಟಿ, ನಾಯಿಯನ್ನಾಗಿಸಿ ರೇಲ್ವೆ ಸ್ಟೇಷನ್ ಸುತ್ತಾಡಿಸಿದ ಮಹಿಳೆ! ಕಾರಣ ತುಂಬಾ ವಿಚಿತ್ರ

Mon, 08 Nov 2021-1:59 pm,

1. ವಿಚಿತ್ರ ತರ್ಕ ನೀಡಿದ ಜೋಡಿ - 'ಡೈಲಿ ಸ್ಟಾರ್'ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, ಮಹಿಳೆಯ ಹೆಸರು ಲುವಾನಾ ಕಝಕಿ (Luana Kazaki) ಮತ್ತು ಆಕೆಯ ಗಂಡನ ಹೆಸರು ಆರ್ಥರ್ ಒ ಉರ್ಸೊ (Arthur O Urso). ಲುವಾನಾ ತನ್ನ ಪತಿಯನ್ನು ನಾಯಿಯಂತೆ ಸಿಂಗರಿಸಿ , ಅವನ ಕುತ್ತಿಗೆಗೆ ಪಟ್ಟಿಯನ್ನು ಕಟ್ಟಿ ಕಿಕ್ಕಿರಿದ ನಿಲ್ದಾಣಕ್ಕೆ ಕರೆದೊಯ್ದಿದ್ದಾಳೆ. ಅಲ್ಲಿ ಆಕೆ  ಆರ್ಥರ್‌ ನನ್ನು ಬಹಳ ಹೊತ್ತು ನಾಯಿಯಂತೆ ಸುತ್ತಾಡಿಸಿದ್ದಾಳೆ. ಇದಕ್ಕೆ ನಾಯಿಯಾಗುವ ಮೂಲಕ ಸಾರ್ವಜನಿಕ ಸ್ಥಳಕ್ಕೆ ಹೋಗುವುದರಿಂದ ಲೈಂಗಿಕತೆಯು ಹೆಚ್ಚಾಗುತ್ತದೆ ಎಂಬ ವಿಚಿತ್ರ ತರ್ಕವನ್ನು ಈ ದಂಪತಿಗಳು ನೀಡಿದ್ದಾರೆ. 

2. ಕಕ್ಕಾಬಿಕ್ಕಿಯಾಗಿ ನೋಡಿದ ಜನರು - ಆರ್ಥರ್ ಒ' ಉರ್ಸೊ ಅವರ ಉಡುಗೆ ಚರ್ಮದಿಂದ ಮಾಡಲ್ಪಟ್ಟಿತ್ತು ಮತ್ತು ಅದಕ್ಕೆ ಸರಪಳಿಯನ್ನು ಜೋಡಿಸಲಾಗಿತ್ತು. ಈ ವೇಳೆ ದಂಪತಿಗೆ ನಿಲ್ದಾಣದಲ್ಲಿ ಫೋಟೋಶೂಟ್ ಕೂಡ ನಡೆದಿದೆ. ಒಂದು ಫೋಟೋದಲ್ಲಿ, ಲುವಾನ ತನ್ನ ಪತಿ ಆರ್ಥರ್ ಕುತ್ತಿಗೆಗೆ ಸರಪಳಿಯನ್ನು ಹಿಡಿದು ಎಳೆಯುತ್ತಿರುವುದನ್ನು ಕಾಣಬಹುದು. ಈ ಜೋಡಿಯ ಚೇಷ್ಟೆ ನೋಡಿದ ಸ್ಟೇಷನ್ ನಲ್ಲಿದ್ದ ವ್ಯಕ್ತಿ ಏನಾಯ್ತು ಎಂದು ಸ್ವಲ್ಪ ಹೊತ್ತು ಯೋಚಿಸುತ್ತಲೇ ಇದ್ದ ಮತ್ತು ಕಕ್ಕಾಬಿಕ್ಕಿಯಾಗಿ ನೋಡುತ್ತಲೇ ಇದ್ದ.

3. ಜನರ ಪಾಲಿಗೆ ಇದೊಂದು ವಿಚಿತ್ರ ಅನುಭವವಾಗಿತ್ತು - , 'ಜನರು ನನ್ನ ವೇಷಭೂಷಣವನ್ನು ನೋಡಿ ಆಶ್ಚರ್ಯಪಟ್ಟರು. ಇದು ಅವರಿಗೆ ಸಂಪೂರ್ಣ ಹೊಸ ಅನುಭವವಾಗಿತ್ತು. ನಿಲ್ದಾಣದ ನಂತರ, ದಂಪತಿಗಳು ಅದೇ ರೀತಿಯಲ್ಲಿ ಇತರ ಸಾರ್ವಜನಿಕ ಸ್ಥಳಗಳಿಗೆ ತೆರಳಿದರು. ಇದೊಂದು ವಿಭಿನ್ನ ರೀತಿಯ ಸಾಹಸ' ಎಂದು ಪತಿ ಆರ್ಥರ್ ಹೇಳಿಕೊಂಡಿದ್ದಾರೆ. ಇದು ಅವರ ಸೆಕ್ಸ್ ಡ್ರೈವ್ ಅನ್ನು ಹೆಚ್ಚಿಸುತ್ತದೆ. ಅವರು ಹೇಳಿದ್ದಾರೆ. 'ಇತರರಿಗೆ ಇದು ವಿಚಿತ್ರವೆನಿಸಬಹುದು, ಆದರೆ ನಮ್ಮ ಲೈಂಗಿಕ ಜೀವನವು ಇದರಿಂದ ಉತ್ತಮವಾಗುತ್ತದೆ' ಎಂದು ಅವರು ಹೇಳಿದ್ದಾರೆ.   

4. ಕೆನಡಾದಲ್ಲಿಯೂ ಕೂಡ ಇಂತಹುದೇ ಸೀನ್ ಕಾಣಿಸಿಕೊಂಡಿತ್ತು - ಇದಕ್ಕೂ ಮೊದಲು ಕೆನಡಾದಲ್ಲಿಯೂ ಕೂಡ ಓರ್ವ ಮಹಿಳೆ ಇದೆ ರೀತಿ ವರ್ತಿಸಿದ್ದಳು. ಆದರೆ, ನಂತರ ಆಕೆ ತನ್ನ ವರ್ತನೆಗೆ ದಂಡ ಕೂಡ ಪಾವತಿಸಿದ್ದಳು . ಅಲ್ಲಿ ಆ ಮಹಿಳೆ ತನ್ನ ಗಂಡನ ಕೊರಳಿಗೆ ಚೈನ್ ಹಾಗೂ ಸುತ್ತಾಡಿಸಿದ್ದಳು. ಇನ್ನೊಂದೆಡೆ ಲೈಂಗಿಕ ಜೀವನ ಸುಧಾರಣೆಗಾಗಿ ಪತಿಯನ್ನು ನಾಯಿಯಾಗಿಸಿ ಸುತ್ತಾಡಿಸುವ ಐಡಿಯಾ ಊಹೆಗೂ ಮೀರಿದೆ ಮತ್ತು ಕಾಮೋತ್ತೆಜನಕ್ಕಾಗಿ ಇಂತಹ ಪ್ರದರ್ಶನ ಯೋಗ್ಯವಲ್ಲ ಎಂದು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link