`ನಾನು ಆದಷ್ಟು ಬೇಗ ಬೆಂಗಳೂರಿಗೆ ಬರುತ್ತೇನೆ. ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ`

Tue, 31 May 2022-10:30 pm,

ನಿಮ್ಮೆಲ್ಲರಿಗೂ ಇದಕ್ಕಾಗಿ ಅಭಿನಂದನೆಗಳು. ನಾನು ಆದಷ್ಟು ಬೇಗ ಬೆಂಗಳೂರಿಗೆ ಬರುತ್ತೇನೆ. ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ. 

ಈ ವಿಡಿಯೋದಲ್ಲಿ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಖುದ್ದು ಮಾತನಾಡಿದ್ದು, ರಾ ರಾ ರಕ್ಕಮ್ಮ ಸಾಂಗ್‌ ದೊಡ್ಡ ಹಿಟ್‌ ಕೊಟ್ಟಿದೆ.

ಈ ಹಾಡಿನಲ್ಲಿ ರಕ್ಕಮ್ಮನಾಗಿ ಹೆಜ್ಜೆ ಹಾಕಿರುವ ಶ್ರೀಲಂಕಾ ಬೆಡಗಿ ಜಾಕ್ವೆಲಿನ್‌, ಇದೀಗ ಅಭಿಮಾನಿಗಳ ಭೇಟಿಗೆ ಆಗಮಿಸಲಿದ್ದಾರಂತೆ. ಈ ಬಗ್ಗೆ ಟ್ವಿಟರ್‌ನಲ್ಲಿ ವಿಕ್ರಾಂತ್‌ ರೋಣ ತಂಡ ಮಾಹಿತಿಯನ್ನು ಹಂಚಿಕೊಂಡಿದೆ.  

ಈ ಹಾಡಿಗೆ ಮೊದಲ ಬಾರಿಗೆ ನಟ ಸುದೀಪ್‌ ರೀಲ್ಸ್‌ ಮಾಡುವ ಮೂಲಕ ಮತ್ತಷ್ಟು ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. 

ಕಿಚ್ಚ ಸುದೀಪ್‌ ಹಾಗೂ ಜಾಕ್ವೆಲಿನ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ʻಗಡಂಗ್‌ ರಕ್ಕಮ್ಮʼ ಹಾಡು ಎಲ್ಲೆಲ್ಲೂ ಸದ್ದು ಮಾಡುತ್ತಿದೆ. 

ಅನೂಪ್ ಭಂಡಾರಿ ನಿರ್ದೇಶಿಸಿರುವ ವಿಕ್ರಾಂತ್‌ ರೋಣ ಮೂಲಕ ಜಾಕ್ವೆಲಿನ್‌ ಫರ್ನಾಂಡಿಸ್‌ ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link