ನೀವೂ ಈ ದೇವರ ಭಕ್ತರಾಗಿದ್ದರೆ ಶನಿ ದೆಸೆಯ ಸಂದರ್ಭದಲ್ಲಿಯೂ ಕಾಡುವುದಿಲ್ಲ ಛಾಯಾ ಪುತ್ರ
ಪೌರಾಣಿಕ ಗ್ರಂಥಗಳ ಪ್ರಕಾರ, ಶನಿ ದೇವನು ಕರ್ಮಕ್ಕೆ ತಕ್ಕ ಫಲ ನೀಡುವವನು. ಆತ ವ್ಯಕ್ತಿಯ ಒಳಿತು ಕೆಡುಕುಗಳ ಲೆಕ್ಕವನ್ನು ಇಡುತ್ತಾನೆ. ಮುಂದಿನ ವರ್ಷ ಜನವರಿ 17 ರಂದು ಶನಿ ಗ್ರಹ ಕುಂಭ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಮಕರ, ಕುಂಭ, ಮೀನ ರಾಶಿಗಳಲ್ಲಿ ಶನಿಯ ಸಾಡೇ ಸತಿ ಆರಂಭವಾಗಲಿದೆ.
ಕುಂಭ ರಾಶಿಗೆ ಶನಿ ಪ್ರವೇಶವಾಗುತ್ತಿದ್ದಂತೆಯೇ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಎರಡೂವರೆ ಶನಿ ದೆಸೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿ ದೆಸೆಯಿಂದ ಮುಕ್ತಿ ಸಿಗಲಿದೆ.
ಶ್ರೀಕೃಷ್ಣನ ಭಕ್ತರಾಗಿದ್ದರೆ, ಶನಿದೇವನು ಶುಭ ಫಲಿತಾಂಶಗಳನ್ನು ನೀಡುತ್ತಾನೆ ಎನ್ನಲಾಗಿದೆ. ಶನಿದೇವನೂ ಶ್ರೀಕೃಷ್ಣನನ್ನು ಪೂಜಿಸುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಮಥುರಾದ ಕೋಸಿಕಲನ ಕೋಲಿಕಾವನದಲ್ಲಿ ಶ್ರೀಕೃಷ್ಣನ ತಪಸ್ಸಿಗೆ ಕುಳಿತಿದ್ದರಂತೆ ಶನಿ ದೇವ. ಇದಾದ ನಂತರ ಶ್ರೀಕೃಷ್ಣ ಕೋಗಿಲೆಯ ರೂಪದಲ್ಲಿ ಶನಿ ದೇವರಿಗೆ ದರ್ಶನ ನೀಡಿದ್ದರಂತೆ. ಹಾಗಾಗಿ ಯಾರು ಶ್ರೀ ಕೃಷ್ಣನನ್ನು ಪೂಜಿಸುತ್ತಾರೆಯೋ ಅವರಿಗೆ ಶನಿ ಮಹಾತ್ಮ ಉತ್ತಮ ಫಲವನ್ನೇ ನೀಡುತ್ತಾನೆ ಎನ್ನಲಾಗಿದೆ.
ಶನಿ ದೇವನು ಶಿವನ ಭಕ್ತರ ಮೇಲೆ ಕೂಡಾ ತುಸು ಹೆಚ್ಚೇ ಆಶೀರ್ವಾದ ಇಟ್ಟಿರುತ್ತಾನೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶನಿದೇವನ ತಂದೆ ಸೂರ್ಯದೇವ ಶನಿ ದೇವ ಮತ್ತು ಆತನ ತಾಯಿ ಛಾಯಾ ದೇವಿಯನ್ನು ಅವಮಾನಿಸಿದ್ದರಂತೆ. ಇದರ ನಂತರ ಶನಿದೇವನು ತಪಸ್ಸು ಮಾಡುವ ಮೂಲಕ ಶಿವನನ್ನು ಮೆಚ್ಚಿಸಿದ್ದಾನೆ. ಈ ತಪ್ಪಸ್ಸಿಗೆ ಒಲಿದ ಶಿವನು ಶನಿ ದೇವನನ್ನು ಗ್ರಹಗಳ ನ್ಯಾಯಾಧೀಶನಾಗಿರುವಂಥ ವರ ಕರುಣಿ ಸುತ್ತಾನೆಯಂತೆ. ಹೀಗಾಗಿ ಈಶ್ವರನನ್ನು ಪೂಜಿಸುವವರನ್ನು ಶನಿ ದೇವ ದಂಡಿಸುವುದಿಲ್ಲ ಎನ್ನಲಾಗಿದೆ.
ಇನ್ನು ಶನಿವಾರ ಶನಿದೇವನ ಜೊತೆಗೆ ಆಂಜನೇಯ ಸ್ವಾಮಿಯನ್ನು ಕೂಡ ಪೂಜಿಸಲಾಗುತ್ತದೆ. ಒಮ್ಮೆ ಶನಿ ದೇವರು ತನ್ನ ಶಕ್ತಿಯ ಮೇಲಿನ ಅಹಂಕಾರ ಪ್ರದರ್ಶಿಸಲು ಆರಂಭಿಸುತ್ತಾರೆಯಂತೆ. ಆದರೆ ಆ ಅಹಂಕಾರವನ್ನು ಆಂಜನೇಯ ಸ್ವಾಮಿ ಕ್ಷಣ ಮಾತ್ರದಲ್ಲಿ ಮುರಿಯುತ್ತಾರೆ. ಈ ಸಂದರ್ಭದಲ್ಲಿ ತಾನು ಎಂದಿಗೂ ಆಂಜನೇಯ ಭಕ್ತರಿಗೆ ಕಷ್ಟ ನೀಡುವುದಿಲ್ಲ ಎಂದು ಶನಿದೇವ ಆಂಜನೇಯ ಸ್ವಾಮಿಗೆ ಭಾಷೆ ನೀಡುತ್ತಾರೆಯಂತೆ.