Online Fraud ಆದರೂ ಕೇವಲ ನಿಮಿಷಗಳಲ್ಲಿ ಮತ್ತೆ ನಿಮ್ಮ ಖಾತೆ ಸೇರುತ್ತದೆ ದುಡ್ಡು..!

Sun, 18 Apr 2021-2:01 pm,

 ತಾಂತ್ರಿಕ ಯುಗದಲ್ಲಿ, ಹೆಚ್ಚುತ್ತಿರುವ ಆನ್‌ಲೈನ್ ವಂಚನೆಯ ಪ್ರಕರಣಗಳನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಈಗ ಸಂಪೂರ್ಣವಾಗಿ ಸಿದ್ಧವಾಗಿದೆ. ಇತ್ತೀಚೆಗೆ, ಕೇಂದ್ರ ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ ವಿಶೇಷ ನಂಬರ್ ವೊಂದನ್ನು ನೀಡಿದೆ.  

ಆನ್‌ಲೈನ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಲು ನೀಡಲಾದ ಹೆಲ್ಪ್ ಲೈನ್ ನಂಬರ್ 155260 ಗೆ ಕರೆ ಮಾಡಿದ 7 ರಿಂದ 8 ನಿಮಿಷಗಳಲ್ಲಿ, ನಿಮ್ಮ ಎಲ್ಲಾ ಹಣವನ್ನು ಮತ್ತೆ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಸರ್ಕಾರ ಹೇಳುತ್ತದೆ.

 ಅಧಿಕಾರಿಗಳು ದೂರು ಸ್ವೀಕರಿಸಿದ ನಂತರ, ಸಂಪೂರ್ಣ ವಿವರಗಳನ್ನು ಪರಿಶೀಲಿಸಲಾಗುತ್ತದೆ.  ನಿಮ್ಮ ಹಣವನ್ನು ಯಾವ ಖಾತೆ ಅಥವಾ ಐಡಿಗೆ  ವರ್ಗಾಯಿಸಲಾಗಿದೆ ಎಂಬುದನ್ನು ಕಂಡು ಹಿಡಿಯಲಾಗುತ್ತದೆ. ಅದರ ಮಾಹಿತಿ ಸಿಕ್ಕಿದ ತಕ್ಷಣ, ಆ ಬ್ಯಾಂಕ್ ಅಥವಾ ಇ-ಸೈಟ್‌ಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗುತ್ತದೆ. ಇದರ ನಂತರ, ನಿಮ್ಮ ಹಣವನ್ನು ವಾಪಸ್ ತೆಗೆದುಕೊಳ್ಳಲಾಗುತ್ತದೆ. 

ನೀವು ಯಾವತ್ತಾದರೂ,  ವಂಚನೆಗೆ  ಒಳಗಾದರೆ, ಮೊದಲು 155260 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ. ಫೋನ್ ಸಂಪರ್ಕಗೊಂಡಾಗ, ಹೆಸರು, ಮೊಬೈಲ್ ಸಂಖ್ಯೆ, ವಂಚನೆ ಸಮಯ, ಬ್ಯಾಂಕ್ ಖಾತೆ ವಿವರಗಳು ಇತ್ಯಾದಿ ವಿವರಗಳನ್ನು ನೀಡಬೇಕು. ಇದಾದ ಮೇಲೆ ನಿಮ್ಮ ದೂರಿನ ಬಗ್ಗೆ ಪರಿಶೀಲಿಸಲಾಗುತ್ತದೆ. 

ಇದರ ನಂತರ, ಮುಂದಿನ ಕ್ರಮಕ್ಕಾಗಿ ಸಹಾಯವಾಣಿ ಸಂಖ್ಯೆ ನಿಮ್ಮ ಮಾಹಿತಿಯನ್ನು ಪೋರ್ಟಲ್‌ಗೆ ಕಳುಹಿಸುತ್ತದೆ. ನಂತರ ವಂಚನೆಯ ಬಗ್ಗೆ ಸಂಬಂಧಪಟ್ಟ ಬ್ಯಾಂಕ್‌ಗೆ ತಿಳಿಸಲಾಗುವುದು. ಅದರ ನಂತರ ಬ್ಯಾಂಕ್ ಈ ಹಣವನ್ನು ತಡೆಹಿಡಿಯುತ್ತದೆ. ಮತ್ತು ನಿಮ್ಮ ಖಾತೆಗೆ ಅದನ್ನ ವರ್ಗಾಯಿಸುತ್ತದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link