ರಾತ್ರಿ ಊಟದ ನಂತರ ಈ ತರಕಾರಿ ತಿಂದರೆ ಬ್ಲಡ್ ಶುಗರ್ ಸಂಪೂರ್ಣ ಹತೋಟಿಯಲ್ಲಿ ಇರುತ್ತೆ! ಯಾವ ಪಥ್ಯದ ಅಗತ್ಯವೂ ಇರಲ್ಲ!

Thu, 25 Apr 2024-7:19 pm,

ಟೊಮೆಟೊ ರುಚಿಕರವಾದುದಲ್ಲದೆ ಪೋಷಕಾಂಶಗಳ ಖಜಾನೆಯೂ ಹೌದು. ವಿಟಮಿನ್-ಸಿ, ವಿಟಮಿನ್-ಎ, ನಾರಿನಂಶ, ಕ್ಯಾಲ್ಸಿಯಂ ಹೀಗೆ ಹಲವು ಪೌಷ್ಟಿಕಾಂಶಗಳು ಇದರಲ್ಲಿವೆ. ಇದು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಟೊಮೆಟೊದಲ್ಲಿ ಕಂಡುಬರುತ್ತವೆ. ಇದು ಮೂಳೆಗಳನ್ನು ಆರೋಗ್ಯವಾಗಿಡಲು ಸಹಕಾರಿ. ನಿಮ್ಮ ದೇಹಕ್ಕೆ ಕ್ಯಾಲ್ಸಿಯಂ ಅನ್ನು ಪೂರೈಸುತ್ತದೆ.

ಟೊಮೆಟೊದಲ್ಲಿರುವ ಲೈಕೋಪೀನ್ ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಟೊಮೆಟೊಗಳನ್ನು ಸೇರಿಸಿದರೆ,  ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಟೊಮ್ಯಾಟೊ ತಿನ್ನುವುದರಿಂದ ಜೀರ್ಣಕ್ರಿಯೆ ಆರೋಗ್ಯಕರವಾಗಿರುತ್ತದೆ. ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುತ್ತದೆ. ಕಾಮಾಲೆಯಂತಹ ರೋಗಗಳನ್ನು ಕಡಿಮೆ ಮಾಡುವಲ್ಲಿ ಟೊಮೇಟೊ ಪರಿಣಾಮಕಾರಿಯಾಗಿದೆ.

ಟೊಮೆಟೊದಲ್ಲಿ ಲೈಕೋಪೀನ್ ಇರುತ್ತದೆ. ಇದು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ವಿಟಮಿನ್ ಎ ನಿಮ್ಮ ಕೂದಲನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ.

ಕ್ರೋಮಿಯಂ ಟೊಮೆಟೊಗಳಲ್ಲಿ ಕಂಡುಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹ ಇರುವವರು ತಮ್ಮ ಆಹಾರದಲ್ಲಿ ಟೊಮೆಟೊವನ್ನು ಸೇರಿಸಿಕೊಳ್ಳಬೇಕು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ.

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link