ಹೀಗೆ ಮಾಡಿದರೆ ಹಾಲು ಉಕ್ಕಿ ಕೆಳಗೆ ಚೆಲ್ಲುವುದಿಲ್ಲ, ಪಾತ್ರೆಗೆ ಹಿಡಿಯುವುದೂ ಇಲ್ಲ
ಕೆಲವರು ಹಾಲು ಕುದಿಯುವುದಕ್ಕೆ ಬಿಟ್ಟು ಹಾಗೆ ಮರೆತುಬಿಡುತ್ತಾರೆ. ಹೀಗಾದಾಗ ಹಾಲು ಉಕ್ಕಿ ಸ್ಟೋವ್ ಮೇಲೆಲ್ಲಾ ಹರಡಿಕೊಳ್ಳುತ್ತದೆ. ಪಾತ್ರೆಯಿಂದ ಕೆಳಗೆ ಚೆಲ್ಲಿ ಎಲ್ಲ ಕಡೆ ಹಾಲಿನ ವಾಸನೆಯೇ ಹರಡಿಕೊಳ್ಳುತ್ತದೆ.
ಮೊದಲನೆಯದಾಗಿ, ಹಾಲು ಕುದಿಯಲು ಇಡುವ ಪ್ಯಾನ್ ಅಥವಾ ಪಾತ್ರೆಯ ಕೆಳಭಾಗದಲ್ಲಿ ಅರ್ಧ ಕಪ್ ನೀರನ್ನು ಹಾಕಿ. ಪಾತ್ರೆಯ ಕೆಳಭಾಗವು ಒದ್ದೆಯಾದ ನಂತರ ಹಾಲು ಪಾತ್ರೆಯಾ ಕೆಳಭಾಗಕ್ಕೆ ಅಂಟಿಕೊಳ್ಳುವುದಿಲ್ಲ.
ನೀವು ಹಾಲನ್ನು ಕುದಿಯಲು ಇಟ್ಟಾಗ, ಅದರಲ್ಲಿ ಒಂದು ಚಮಚ ಹಾಕಿ. ಇದರಿಂದಾಗಿ ಹಾಲು ಉಕ್ಕಿ ಹೊರ ಬರುವುದಿಲ್ಲ.
ಹಾಲನ್ನು ಬಿಸಿ ಮಾಡುವಾಗ, ಮರದ ಚಮಚವನ್ನು ಪಾತ್ರೆಯ ಮೇಲೆ ಅಡ್ಡಕ್ಕೆ ಇರಿಸಿ. ಹೀಗೆ ಮಾಡಿದರೆ ಹಾಲು ಪಾತ್ರೆಯಿಂದ ಹೊರ ಬರುವುದಿಲ್ಲ.
ಹಾಲು ಕುದಿಸುವ ಪಾತ್ರೆಯ ಬದಿಗಳಿಗೆ ಬೆಣ್ಣೆ ಸವರಿದರೂ, ಹಾಲು ಉಕ್ಕಿ ಹೊರ ಬರುವುದಿಲ್ಲ.