ಕಿಡ್ನಿಸ್ಟೋನ್’ಗೆ ಸಂಜೀವಿನಿ ಇದ್ದಂತೆ ಈ ಗಿಡದಲ್ಲಿ ಶೇಖರಣೆಯಾದ ನೀರು! ಸೇವಿಸಿದ ತಕ್ಷಣ ಕಲ್ಲು ಪುಡಿಯಾಗಿ ಮೂತ್ರಕೋಶದಿಂದ ಹೊರಬರುತ್ತೆ!
ಬಾಳೆಹಣ್ಣು ಪೊಟ್ಯಾಸಿಯಂನ ಪ್ರಮುಖ ಮೂಲವಾಗಿದೆ. ಅದರ ಹೂವುಗಳನ್ನು ಮಧುಮೇಹಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ, ಬಾಳೆ ಕಾಂಡದ ಅನೇಕ ಪೋಷಕಾಂಶಗಳ ಬಗ್ಗೆ ಎಂದಾದರೂ ಕೇಳಿದ್ದೀರಾ?
ಕೇರಳ ರಾಜ್ಯದಲ್ಲಿ ಬಾಳೆ ಕಾಂಡದಿಂದ ಸಂಗ್ರಹಿಸಿದ ನೀರನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದೇ ಕಾರಣದಿಂದ ಅಲ್ಲಿನ ಜನರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಬರುವುದು ಕಡಿಮೆ, ಅಷ್ಟೇ ಅಲ್ಲದೆ, ಒಂದು ವೇಳೆ ಸ್ಟೋನ್ ಆಗಿದ್ರೂ ಸಹ ಇದರ ಸೇವನೆಯಿಂದ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಆ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ. ಹೀಗೆ ಮಾಡಿದರೆ ರಕ್ತದೊತ್ತಡವೂ ನಿಯಂತ್ರಣವಾಗುವುದಲ್ಲದೆ, ಕಿಡ್ನಿ ಸ್ಟೋನ್ ಪುಡಿಯಾಗಿ ಒಂದೇ ದಿನದಲ್ಲಿ ಮೂತ್ರಕೋಶದಿಂದ ಹೊರಬರುತ್ತದೆ.
ಬಾಳೆ ಕಾಂಡವು ದೇಹದ ಜೀವಕೋಶಗಳಲ್ಲಿರುವ ಸಕ್ಕರೆ ಮತ್ತು ಕೊಬ್ಬನ್ನು ಬಿಡುಗಡೆ ಮಾಡುತ್ತದೆ. ಇದು ಫೈಬರ್ನಲ್ಲಿ ಸಮೃದ್ಧವಾಗಿದ್ದು, ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ.
ಬಾಳೆ ಕಾಂಡದ ರಸವು ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹೊಟ್ಟೆಗೆ ತುಂಬಾ ಒಳ್ಳೆಯದು. ಜೀರ್ಣಕ್ರಿಯೆ, ಮಲಬದ್ಧತೆ ಅಥವಾ ಆಮ್ಲೀಯತೆಯಂತಹ ಸಮಸ್ಯೆಗಳನ್ನು ಎದುರಿಸಲು ಇದು ಮನೆಮದ್ದು.
ಬಾಳೆ ಕಾಂಡವು ವಿಟಮಿನ್ ಬಿ 6 ನಲ್ಲಿ ಸಮೃದ್ಧವಾಗಿದ್ದು, ಹಿಮೋಗ್ಲೋಬಿನ್ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಪೊಟ್ಯಾಸಿಯಮ್ ಸಹ ಅದರಲ್ಲಿ ಕಂಡುಬರುತ್ತದೆ. ಇದು ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತೆಗೆದುಹಾಕಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇದ್ದರೆ ಬಾಳೆ ಕಾಂಡದ ರಸದಲ್ಲಿ ಏಲಕ್ಕಿಯನ್ನು ಬೆರೆಸಿ ಸೇವಿಸಿ. ಇದು ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಲೋಟ ಬಾಳೆ ಕಾಂಡದ ರಸವನ್ನು ನಿಂಬೆ ರಸದೊಂದಿಗೆ ಬೆರೆಸಿ ಕುಡಿಯುವುದು ಸಹ ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯುತ್ತದೆ.
ಬಾಳೆ ಕಾಂಡದ ರಸವು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ. ಆದ್ದರಿಂದ ಮಧುಮೇಹದ ಚಿಕಿತ್ಸೆಗೆ ಇದು ತುಂಬಾ ಪ್ರಯೋಜನಕಾರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.