Vastu Tips: ಮಲಗುವಾಗ ದಿಂಬಿನ ಕೆಳಗೆ ಈ ತರಕಾರಿಯನ್ನು ಇಟ್ಟರೆ ಅದೃಷ್ಟ ಒಂದೇ ರಾತ್ರಿಯಲ್ಲಿ ಬದಲಾಗುವುದು ಖಂಡಿತ!
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವಾಗ ದಿಂಬಿನ ಕೆಳಗೆ ಗೀತಾ ಅಥವಾ ಸುಂದರಕಾಂಡ ಪವಿತ್ರ ಗ್ರಂಥವನ್ನು ಇಟ್ಟುಕೊಳ್ಳುವುದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಕಾರ್ಯಕ್ಷಮತೆಯೂ ಸುಧಾರಿಸುತ್ತದೆ ಮತ್ತು ಜಾತಕದಲ್ಲಿ ಗುರುವೂ ಬಲಶಾಲಿಯಾಗುತ್ತಾನೆ.
ವಾಸ್ತು ಶಾಸ್ತ್ರದ ಪ್ರಕಾರ, ನಿದ್ರೆಯ ಸಮಸ್ಯೆ ತುಂಬಾ ಹೆಚ್ಚಿದ್ದರೆ, ಮೂಲಂಗಿಯ ಪರಿಹಾರವನ್ನು ಮಾಡಿ. ರಾತ್ರಿ ಮಲಗುವಾಗ ಮೂಲಂಗಿಯನ್ನು ದಿಂಬಿನ ಕೆಳಗೆ ಇಟ್ಟು ಬೆಳಗ್ಗೆ ಸ್ನಾನ ಮಾಡಿದ ನಂತರ ಆ ಮೂಲಂಗಿಯನ್ನು ಶಿವಲಿಂಗದ ಮೇಲಿಟ್ಟರೆ, ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ, ಜೊತೆಗೆ ರಾಹುದೋಷವೂ ತೊಲಗುತ್ತದೆ.
ನಿದ್ರೆಯ ಸಮಸ್ಯೆಯನ್ನು ಹೋಗಲಾಡಿಸಲು ರಾತ್ರಿ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಕೊಂಡು ಮಲಗಿ, ಬೆಳಗ್ಗೆ ಆ ನೀರನ್ನು ಮತ್ತೊಂದು ತಾಮ್ರದ ಪಾತ್ರೆಗೆ ಹಾಕಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ಸೂರ್ಯನೂ ಬಲಶಾಲಿಯಾಗುತ್ತಾನೆ, ವೃತ್ತಿಯಲ್ಲಿ ಪ್ರಗತಿಯುಂಟಾಗುತ್ತದೆ. ಜೊತೆಗೆ ನಿದ್ರಾಹೀನತೆಯ ಸಮಸ್ಯೆಯೂ ದೂರವಾಗುತ್ತದೆ.
ಹೆಸರು ಕಾಳುಗಳನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ದಿಂಬಿನ ಕೆಳಗೆ ಇಟ್ಟು ಮಂಗಳವಾರ ರಾತ್ರಿ ಮಲಗಬೇಕು. ಮರುದಿನ ಇವುಗಳನ್ನು ಹುಡುಗಿಗೆ ದಾನ ಮಾಡಿ ಅಥವಾ ಮಾತೆ ದುರ್ಗೆಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ಬುಧ ಗ್ರಹ ಬಲಶಾಲಿಯಾಗುತ್ತಾನೆ. ಅದೇ ಸಮಯದಲ್ಲಿ ವ್ಯಾಪಾರ ಬೆಳೆಯುತ್ತದೆ, ಆದಾಯ ಹೆಚ್ಚಾಗುತ್ತದೆ.
ನಿಮಗೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಅಥವಾ ಭಯದಿಂದ ಆಗಾಗ ಎಚ್ಚರಗೊಂಡರೆ, ದಿಂಬಿನ ಕೆಳಗೆ ಚಾಕು ಅಥವಾ ಕಬ್ಬಿಣದ ತುಂಡುಗಳನ್ನು ಇಟ್ಟುಕೊಂಡು ರಾತ್ರಿ ಮಲಗಿಕೊಳ್ಳಿ. ಹೀಗೆ ಮಾಡುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ. ಶನಿ, ರಾಹು, ಕೇತು ದೋಷಗಳಿಂದಲೂ ಪರಿಹಾರ ದೊರೆಯುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)