ಸೂರ್ಯಾಸ್ತದ ಬಳಿಕ ಇವುಗಳನ್ನು ಕಂಡರೆ ಶೀಘ್ರದಲ್ಲೇ ಲಕ್ಷ್ಮಿ ನಿಮ್ಮ ಮನೆ ಪ್ರವೇಶಿಸಲಿದ್ದಾಳೆ ಎಂದರ್ಥ
ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯೋದಯದಂತೆ ಸೂರ್ಯಾಸ್ತಕ್ಕೂ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ಬಳಿಕ ಕಾಣುವ ಕೆಲವು ಚಿಹ್ನೆಗಳು ಆ ಮನೆಯಲ್ಲಿ ಶೀಘ್ರದಲ್ಲೇ ಮಾತೆ ಲಕ್ಷ್ಮಿ ಪ್ರವೇಶವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ.
ಹಿಂದೂ ಧರ್ಮದಲ್ಲಿ ಮಾತೆ ಲಕ್ಷ್ಮಿಯನ್ನು ಸಂಪತ್ತು, ವೈಭವ, ಸಂತೋಷ ಮತ್ತು ಸಮೃದ್ಧಿಯ ಪ್ರತೀಕ ಎನ್ನಲಾಗುತ್ತದೆ. ಯಾವ ಮನೆಯಲ್ಲಿ ಲಕ್ಷ್ಮಿಯ ಆಶೀರ್ವಾದ ಇರುತ್ತದೋ ಅಂತಹ ಮನೆಯಲ್ಲಿ ಎಂದಿಗೂ ಹಣದ ಸಮಸ್ಯೆ ಇರುವುದಿಲ್ಲ. ಸುಖ-ಸಂಪತ್ತಿಗೆ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.
ಹಾಗಾಗಿಯೇ, ಪ್ರತಿಯೊಬ್ಬರೂ ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕು ಎಂದು ಬಯಸುತ್ತಾರೆ.
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ಬಳಿಕ ಕಾಣಿಸಿಕೊಳ್ಳುವ ಕೆಲವು ಚಿಹ್ನೆಗಳು ನಿಮ್ಮ ಮನೆಗೆ ಶೀಘ್ರದಲ್ಲೇ ಲಕ್ಷ್ಮಿ ಆಮನವಾಗಲಿದೆ ಎಂಬುದನ್ನೂ ಸೂಚಿಸುತ್ತದೆ. ಆ ಸುಳಿವುಗಳೆಂದರೆ...
ಮುಸ್ಸಂಜೆ ವೇಳೆಯಲ್ಲಿ ಹಕ್ಕಿ ಗೂಡು ಕಟ್ಟುವುದನ್ನು ನೀವು ಕಂಡರೆ ಅತಿ ಶೀಘ್ರದಲ್ಲಿ ಹಠಾತ್ ಧನಲಾಭವಾಗಲಿದೆ ಎಂದರ್ಥ.
ಮನೆಯಲ್ಲಿ ಸಂಜೆ ಸೂರ್ಯಾಸ್ತದ ನಂತರ ನೀವು ಇದ್ದಕ್ಕಿದ್ದಂತೆ ಕಪ್ಪು ಇರುವೆಗಳ ಸಮೂಹವನ್ನು ಕಂಡರೆ ಇದು ಸಂಪತ್ತಿನ ದೇವತೆ ನಿಮ್ಮಿಂದ ಸಂತುಷ್ಟಗೊಂಡಿದ್ದಾಳೆ. ನಿಮ್ಮ ಮೇಲೆ ಲಕ್ಷ್ಮಿಯ ಅನುಗ್ರಹವಿದೆ ಎಂಬುದನ್ನು ಸೂಚಿಸುತ್ತದೆ.
ಸಾಮಾನ್ಯವಾಗಿ ಹಲ್ಲಿಯನ್ನು ಕಂಡರೆ ಜನ ಹೆದರುತ್ತಾರೆ. ಆದರೆ, ಸೂರ್ಯಾಸ್ತದ ಬಳಿಕ ಹಲ್ಲಿಯನ್ನು ಕಾಣುವುದು ಶುಭ ಸಂಕೇತ. ಅದರಲ್ಲೂ ಮೂರು ಹಲ್ಲಿಗಳನ್ನು ಒಟ್ಟಿಗೆ ಕಂಡರೆ ಇದು ಲಕ್ಷ್ಮಿ ಆಗಮನವನ್ನು ಸೂಚಿಸುತ್ತದೆ.
ಇದಲ್ಲದೆ, ರಾತ್ರಿ ವೇಳೆ ಕನಸ್ಸಿನಲ್ಲಿ ಪೊರಕೆ, ಶಂಖ, ಹಾವು, ಕಮಲ, ಗುಲಾಬಿ ಹೊವುಗಳನ್ನು ಕಂಡರೆ ಇದೂ ಸಹ ಶೀಘ್ರದಲ್ಲೇ ನಿಮ್ಮ ಮನೆಗೆ ಸಂಪತ್ತಿನ ಲಕ್ಷ್ಮಿ ಆಗಮಿಸಲಿದ್ದಾಳೆ ಎಂಬುದರ ಸಂಕೇತವಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.