ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು.
ನಗರಾಭನಗರಾಭಿವೃದ್ಧಿ ಇಲಾಖೆ ಅಡಿ ಎನ್ ಜಿಟಿ ನಿರ್ದೇಶನಗಳ ಅನುಸರಣೆಗಾಗಿ ತ್ವರಿತ ಪರಿಸರ ಪರಿಹಾರ ನಿಧಿಯಡಿ 110 ಮಲತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲು ಒಪ್ಪಿಗೆ. 400.24 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ಜನಸಂಖ್ಯೆ ಕಡಿಮೆ ಇರುವ ಎಲ್ಲಾ ಪಟ್ಟಣಗಳಲ್ಲಿ ಈ ಘಟಕ ಸ್ಥಾಪಿಸಲು ಒಪ್ಪಿಗೆ. 40.25 ಕೋಟಿ ವೆಚ್ಚದಲ್ಲಿ 110 ಪಟ್ಟಣದಲ್ಲಿ ಎಸ್ ಬಿಎಂ ನಿಧಿಯಡಿ ಸೆಸ್ ಪೂಲ್ ವಾಹನ ಖರೀದಿಗೆ ಒಪ್ಪಿಗೆ ನೀಡಿದ ಸಂಪುಟ ಸಭೆ.
ಸಚಿವರ ಸಂಬಳ, ಭತ್ಯೆಗಳ ತಿದ್ದುಪಡಿ ಅಧಿನಿಯಮ 2022ಕ್ಕೆ ಘಟನೋತ್ತರ ಅನುಮೋದನೆ. 2022ರ ಮಾರ್ಚ್ 11ರಂದೇ ಗೆಜೆಟ್ ಪ್ರಕಟವಾಗಿರುವುದಕ್ಕೆ ಈಗ ಸಂಪುಟ ಘಟನೋತ್ತರ ಅನುಮೋದನೆ
ರಸಗೊಬ್ಬರ ಕಾಪು ದಾಸ್ತಾನು ಮಾಡಲು ಬೀಜ ನಿಗಮ ಮತ್ತು ಸಹಕಾರ ಮಾರಾಟ ಮಹಾಮಂಡಲ ಮಾಡುವ 200 ಕೋಟಿ ರೂ.ಸಾಲಕ್ಕೆ ಖಾತ್ರಿಗೆ ಒಪ್ಪಿಗೆ
ಆರ್ಥಿಕ ಅಥವಾ ಇತರೆ ಅಸಮರ್ಥತೆ ಕಾರಣಗಳಿಂದಾಗಿ ಯಾವೊಬ್ಬ ನಾಗರಿಕನೂ ನ್ಯಾಯದಿಂದ ವಂಚಿತರಾಗದಂತೆ ಸರ್ವರಿಗೂ ಸಮಾನ ನ್ಯಾಯ ಮತ್ತು ಉಚಿತ ಕಾನೂನಿನ ನೆರವಿನ ಅವಕಾಶಗಳನ್ನು ಖಾತರಿಪಡಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ. ಈ ಕಾರಣಕ್ಕಾಗಿ ರಾಜ್ಯದಲ್ಲಿ 100 ಗ್ರಾಮ ನ್ಯಾಯಾಲಯಗಳನ್ನು ರೂ. 25 ಕೋಟಿ ವೆಚ್ಛದಲ್ಲಿ ಸ್ಥಾಪಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ