ಚಿನ್ನ ಖರೀದಿಸುವಾಗ ಇದೊಂದು ಕೆಲಸ ಮಾಡಿ ಸಾವಿರಾರು ರೂಪಾಯಿ ಹಣ ಉಳಿಸಬಹುದು !ದುಬಾರಿ ದುನಿಯಾದಲ್ಲಿ ಇದು ಬಹಳ ಅವಶ್ಯಕ
ಚಿನ್ನದ ಮೇಲಿನ ಮೋಹ ಇಲ್ಲದವರು ಬಹಳ ಕಡಿಮೆ. ಅದರಲ್ಲೂ ನಮ್ಮ ದೇಶದ ಮಹಿಳೆಯರಿಗೆ ಚಿನ್ನ ಎಂದರೆ ತುಸು ಹೆಚ್ಚೇ ಪ್ರೀತಿ.
ಅಲಂಕಾರಕ್ಕಾಗಿ ಮಾತ್ರ ಚಿನ್ನ ಖರೀದಿಸುವುದಿಲ್ಲ. ಇದು ಶುಭ ಸಂಕೇತ ಕೂಡಾ. ಮದುವೆ ಮತ್ತಿತರ ಸಮಾರಂಭಗಳಿಗಾಗಿ ಚಿನ್ನ ಖರೀದಿಸುವುದು ಟ್ರೆಂಡ್ ಆಗಿಬಿಟ್ಟಿದೆ.
ಚಿನ್ನದಲ್ಲಿ ಮೂರು ವಿಧಗಳಿವೆ. 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 18 ಕ್ಯಾರೆಟ್. ಈ ಕ್ಯಾರೆಟ್ ಗಳು ಚಿನ್ನದ ಗುಣಮಟ್ಟವನ್ನು ಸೂಚಿಸುತ್ತದೆ. ಚಿನ್ನದ ಶುದ್ದತೆಯ ಬಗ್ಗೆ ಜನರ ಗೊಂದಲ ದೂರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿನ್ನಾಭರಣಕ್ಕೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಿದೆ.
ಚಿನ್ನಾಭರಣದ ಮೇಲಿರುವ ಬಿಐಎಸ್ ಹಾಲ್ ಮಾರ್ಕ್ನಲ್ಲಿ , ಕ್ಯಾರೆಟ್ ಮಾಹಿತಿ ಮತ್ತು ಆಭರಣ ಗುರುತಿನ ಗುರುತು ಇರುತ್ತದೆ. ಬಿಐಎಸ್ ಹಾಲ್ ಗುರುತು ಚಿನ್ನದ ಆಭರಣಗಳ ಶುದ್ಧತೆಯನ್ನು ಸೂಚಿಸುತ್ತದೆ.
ಯಾರೇ ಆಗಲಿ ಚಿನ್ನ ಖರೀದಿಸುವ ಮುನ್ನ ಬಿಐಎಸ್ ಹಾಲ್ ಮಾರ್ಕಿಂಗ್ ಹೊಂದಿದೆಯೇ ಎಂಬುದನ್ನು ಪರಿಶೀಲಿಸಬೇಕು.ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳಿಗೆ ವಿಶಿಷ್ಟವಾದ ಹಾಲ್‌ಮಾರ್ಕ್ಡ್ ಯೂನಿಕ್ ಐಡೆಂಟಿಫಿಕೇಶನ್ (HUID) ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಇದು ಪ್ರತಿ ಆಭರಣಕಾರರಿಗೆ ವಿಭಿನ್ನವಾಗಿರುತ್ತದೆ.
ಆಭರಣ ಪಡೆಯುವವರು ಕಡ್ಡಾಯವಾಗಿ ಹಾಲ್ ಮಾರ್ಕಿಂಗ್ ಕಾರ್ಡ್ ತೆಗೆದುಕೊಳ್ಳಬೇಕು. ಈ ಕಾರ್ಡ್ ಅದರ ತೂಕದ ಜೊತೆಗೆ ಆಭರಣದ ಆಕೃತಿಯಂತಹ ಸಂಪೂರ್ಣ ವಿವರಗಳನ್ನು ಒಳಗೊಂಡಿದೆ. ಚಿನ್ನಾಭರಣ ಖರೀದಿಸುವ ಜನರು ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಇಲ್ಲವಾದಲ್ಲಿ ನಿಮ್ಮಲ್ಲಿರುವ ಬಂಗಾರವನ್ನು ಎಕ್ಸ್ಚೇಂಜ್ ಮಾಡುವಾಗ ಅಥವಾ ಮಾರಾಟ ಮಾಡುವಾಗ, ಕಷ್ಟ ಕಾಲದಲ್ಲಿ ಅಡವಿಡುವಾಗ ನೀವು ನಿರೀಕ್ಸಿಸಿದ ಮೊತ್ತ ಸಿಗುವುದಿಲ್ಲ.