2023 ಆರಂಭವಾಗುತ್ತಿದ್ದಂತೆಯೇ ಐದು ರಾಶಿಯವರಿಗೆ ಅಪಾರ ಹಣ ಸಂಪತ್ತು ಕರುಣಿಸುತ್ತಾನೆ ಗುರು ಬೃಹಸ್ಪತಿ
ಮಿಥುನ ರಾಶಿ : ಆದಾಯ ಹೆಚ್ಚಾಗಲಿದೆ. ಎಲ್ಲಾ ಕಡೆಯಿಂದಲೂ ಲಾಭವಾಗಲಿದೆ. ಏನೇ ಕೆಲಸ ಮಾಡಿದರೂ ಅದೃಷ್ಟ ಕೈ ಹಿಡಿಯಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಪ್ರಸ್ತುತ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಹಣ ಪಡೆಯಲು ಹೊಸ ಮಾರ್ಗಗಳು ಕಂಡುಬರುತ್ತವೆ
ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಗುರುವಿನ ಸಂಚಾರವು ಬಹಳಷ್ಟು ಲಾಭವನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಅನೇಕ ಹೊಸ ಅವಕಾಶಗಳು ಬರಲಿವೆ. ಬಡ್ತಿ ಸಿಗುವುದರೊಂದಿಗೆ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ.
ಕನ್ಯಾ ರಾಶಿ : ಏನೇ ಕೆಲಸ ಮಾಡಿದರೂ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ಕುಟುಂಬದಲ್ಲಿ ಸಂತೋಷ ನೆಲೆಯಾಗುತ್ತದೆ. ವೈವಾಹಿಕ ಜೀವನವು ಪ್ರೀತಿಯಿಂದ ತುಂಬಿರುತ್ತದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ.
ತುಲಾ ರಾಶಿ : 2023ರಲ್ಲಿ ತುಲಾ ರಾಶಿಯವರ ಮೇಲೆ ಗುರುವಿನ ಆಶೀರ್ವಾದ ಬಹಳವಾಗಿ ಇರಲಿದೆ. ಉದ್ಯೋಗಸ್ಥರಿಗೆ ವಿಶೇಷ ಗೌರವ ಸಿಗಲಿದೆ. ಕಂಡ ಕನಸು ನನಸಾಗಲಿದೆ. ಹೊಸ ಉದ್ಯೋಗ ಸಿಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ.
ಮೀನ ರಾಶಿ : ಗುರುವಿನ ರಾಶಿಯ ಬದಲಾವಣೆಯು ಮೀನ ರಾಶಿಯವರಿಗೆ ಆರ್ಥಿಕ ಲಾಭ ನೀಡಲಿದೆ. ನಾನಾ ಮೂಲಗಳಿಂದ ಆದಾಯ ಹರಿದು ಬರಲಿದೆ. .
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)