ಮೇ ತಿಂಗಳಲ್ಲಿ ಇಷ್ಟು ದಿನ ರಜೆ ಇರಲಿದೆ..! ಬ್ಯಾಂಕ್ ಕೆಲಸಗಳಿದ್ದರೆ ಬೇಗ ಪೂರೈಸಿಕೊಳ್ಳಿ

Tue, 27 Apr 2021-6:31 pm,

ಮೇ ತಿಂಗಳಲ್ಲಿ ಒಟ್ಟು 12 ದಿನಗಳವರೆಗೆ ಬ್ಯಾಂಕಿಗೆ ರಜೆ ಇರಲಿದೆ. ಮೇ 1 ರಂದು ಕಾರ್ಮಿಕರ ದಿನ . ಈ ದಿನ ಬ್ಯಾಂಕುಗಳಿಗೆ ರಜೆ ಇರಲಿದೆ.   ಇನ್ನು ಮೇ 2 ಭಾನುವಾರ . ಭಾನುವಾರ ಎಂದಿನಂತೆ ಬ್ಯಾಂಕ್ ಮುಚ್ಚಿರುತ್ತದೆ. 

 ಆರ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಮೇ ತಿಂಗಳಲ್ಲಿ ಒಟ್ಟು 5 ದಿನಗಳವರೆಗೆ ಬ್ಯಾಂಕ್ ರಜೆ ಇರಲಿದೆ. ಆದಾಗ್ಯೂ, ಆರ್‌ಬಿಐ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯಲ್ಲಿ, ಕೆಲವು ರಜಾದಿನಗಳು ಸ್ಥಳೀಯ ರಾಜ್ಯ ಮಟ್ಟದಲ್ಲಿ ಮಾತ್ರ ಇರಲಿದೆ. ಎಲ್ಲಾ ರಾಜ್ಯಗಳಲ್ಲು ಎಲ್ಲಾ ಹಬ್ಬಗಳನ್ನು ಆಚರಿಸದ ಕಾರಣ ಎಲ್ಲಾ ರಾಜ್ಯಗಳಲ್ಲಿ 5 ದಿನಗಳ ರಜೆ ಇರುವುದಿಲ್ಲ.   

ಬ್ಯಾಂಕ್ ರಜಾದಿನವನ್ನು ಹೊರತುಪಡಿಸಿ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮೇ 8 ಮತ್ತು 22 ರಂದು ಬೀಳುತ್ತಿವೆ. ಈ ದಿನ ಬ್ಯಾಂಕ್ ವ್ಯವಹಾರಗಳು ನಡೆಯುವುದಿಲ್ಲ. ಇದಲ್ಲದೆ, ಮೇ 2, 9, 16, 23 ಮತ್ತು 30 ರಂದು ಭಾನುವಾರದ ರಜಾದಿನಗಳಿವೆ.  

ದೇಶದಲ್ಲಿ ಕರೋನಾ ಸೋಂಕಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬ್ಯಾಂಕುಗಳ ಸಂಘಟನೆಯಾದ ಭಾರತೀಯ ಬ್ಯಾಂಕುಗಳ ಸಂಘ (IBM) ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಬ್ಯಾಂಕ್ ತೆರೆಯಲು ಸೂಚಿಸಿದೆ. ಅಂದರೆ, ಈಗ ಸಾರ್ವಜನಿಕರ ಕೆಲಸಕ್ಕಾಗಿ ಬ್ಯಾಂಕುಗಳು ಕೇವಲ 4 ಗಂಟೆಗಳ ಕಾಲ ತೆರೆದಿರುತ್ತದೆ. ಈ ನಿಟ್ಟಿನಲ್ಲಿ, ಐಬಿಎ ಎಲ್ಲಾ ರಾಜ್ಯ ಮಟ್ಟದ ಬ್ಯಾಂಕಿಂಗ್ ಕಮಿಟಿಗಳು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೇಳಿದೆ. ಕರೋನಾದ ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಈ ವ್ಯವಸ್ಥೆಯು ಜಾರಿಯಲ್ಲಿರುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link