ಭನ್ಯಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನಂದೆ..!! ಕಿಚ್ಚನ ಬಳಿ ಒಪ್ಪಿಕೊಂಡ ತ್ರಿವಿಕ್ರಮ್! ಬಿಗ್‌ ಬಾಸ್‌ ಮನೆಯಲ್ಲಿ ಇಷ್ಟೆಲ್ಲಾ ನಡೀತಾ!?‌

Sun, 03 Nov 2024-5:40 pm,

ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್​ ಅವರ ಮುಂದೆ ಸ್ಪರ್ಧಿಗಳು ತಮಾಷೆಯ ಪ್ರಸಂಗವೊಂದನ್ನು ಪ್ರಸ್ತುತ ಪಡಿಸಿದ್ದು, ಕಿಚ್ಚ ಸೇರಿದಂತೆ ಎಲ್ಲರೂ ಎದ್ದುಬಿದ್ದು ನಕ್ಕಿದ್ದಾರೆ.

 

ಈ ಹಾಸ್ಯ ಘಟನೆಯ ವಿಡಿಯೋ ಹಂಚಿಕೊಂಡಿರುವ ವಾಹಿನಿ, "ತ್ರಿಕೋನ ಪ್ರೇಮಕತೆ ಮಿ. ತ್ರಿವಿಕ್ರಮ್ ಜೊತೆ!" ಎಂಬ ಅಡಿಬರಹವನ್ನು ನೀಡಿದೆ.

 

ಉಗ್ರಂ ಮಂಜು ಅವರೇ ನೀವು ಭವ್ಯಾ... ಧನರಾಜ್ ನೀವು ಭನ್ಯಾ.. ನೀವಿಬ್ಬರು ಸೇರಿ ತ್ರಿವಿಕ್ರಮ್‌ ಅವರನ್ನು ಲವ್ ಮಾಡ್ತಿದ್ದೀರಾ ಎಂದು ಸುದೀಪ್ ಈ ಹಾಸ್ಯ ಪ್ರಸಂಗಕ್ಕೆ ಮುನ್ನುಡಿ ಬರೆದರು, ಅಲ್ಲಿಂದ ಇವರಿಬ್ಬರು ತಮಾಷೆಯ ಆಟ ಶುರುವಾಗಿತ್ತು.

 

ಭನ್ಯಾ ಪಾತ್ರಧಾರಿ ಧನರಾಜ್​ "ನಾನು ಮೊದಲೇ ಹೇಳಿದ್ದೀನಿ ಅದು ನಂದು" ಎಂದು ಹೇಳಿದರೆ, ಇದಕ್ಕೆ ಪ್ರತಿಕ್ರಿಯಿಸುವ ಭವ್ಯಾ ಪಾತ್ರಧಾರಿ ಮಂಜು "ನೋಡೋ ಅತ್ತುಬಿಡ್ತೀನಿ.. ಗೊಳೋ ಅಂತಾ"ಎಂದಿದ್ದಾರೆ. ಅದಕ್ಕೆ ಧನರಾಜ್ (ಭನ್ಯಾ)​ "ನೀ ಮಾಡಿದ್ದೇನು.. ಅದೇ ತಾನೇ.. ಬಿಗ್‌ಬಾಸ್‌ನಲ್ಲಿ" ಎಂದು ಕಾಲೆಳಿದ್ದಾರೆ.

 

ಮತ್ತೆ ತಮಾಷೆ ಮುಂದುವರೆಸಿದ ಧನರಾಜ್ (ಭನ್ಯಾ)... "ನಾನು ಇಲ್ಲಿಯವರೆಗೂ ಒಂದು ವಿಷಯ ಹೇಳಿಲ್ಲ. ಹೊಟ್ಟೆಯಲ್ಲಿ ಒಂದು ಮಗು ಇದೆ" ಎಂದರು. ಈ ವೇಳೆ ಇಡೀ ಮನೆಯಲ್ಲಿರುವ ಸ್ಫರ್ಧಿಗಳು ಹಾಗೂ ಕಿಚ್ಚ ಸುದೀಪ್‌ ಜೋರಾಗಿ ನಕ್ಕು ಸುಸ್ತಾಗಿದ್ದಾರೆ.

 

ಕೊನೆಗೆ ಕಿಚ್ಚ ಸುದೀಪ್ ಅವರೇ ಮುಂದೆ ಬಂದು, ತ್ರಿವಿಕ್ರಮ್ ಬಳಿ ಭವ್ಯಾ? ಅಥವಾ ಭನ್ಯಾ? ಎಂದು ಕೇಳಿದಾಗ, "ಹೊಟ್ಟೆಲಿರೋದು ನಂದೆ" ಎಂದು ತ್ರಿವಿಕ್ರಮ್ ಅವರು ಧನರಾಜ್ (ಭನ್ಯಾ) ಕೈ ಎತ್ತುತ್ತಾರೆ. ಆಗ ಸುದೀಪ್ ಮತ್ತಷ್ಟು ಕಾಲೆಯಲು ಮುಂದಾಗಿ, "ಹೊಟ್ಟೆಲಿರೋದು ನಂದೆ ಅಂತ ಕೈ ಎತ್ತಿದ್ರಿ.. ಆದ್ರೆ ಪಕ್ಕದಲ್ಲಿ ಇರೋ ಆ ಕೈ ಯಾಕೆ ಬಿಡ್ತಿಲ್ಲ"ಎಂದು ಕೇಳಿದ್ದಾರೆ.

 

ಸದ್ಯ ಈ ಪ್ರೋಮೋ ಇದೀಗ ಸಖತ್​ ವೈರಲ್​ ಆಗಿದ್ದು, ಇಂದು ರಾತ್ರಿ ಮಜಾ ಸಿಗೋದು ಮಾತ್ರ ಕನ್ಫರ್ಮ್‌ ಅನಿಸುತ್ತಿದೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link