Budh Rahu yuti: 18 ವರ್ಷಗಳ ನಂತರ ಬುಧ-ರಾಹು ಯುತಿಯಿಂದ ಅಶುಭ ಯೋಗ, ಈ ರಾಶಿಯವರಿಗೆ ಭಾರೀ ನಷ್ಟ
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಗ್ರಹವನ್ನು ಪಾಪ, ಕ್ರೂರ ಗ್ರಹ ಎಂದು ಪರಿಗಣಿಸಲಾಗಿದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು ಅಶುಭವಾಗಿದ್ದಾಗ ಆ ವ್ಯಕ್ತಿ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾನೆ ಎಂದು ಹೇಳಲಾಗುತ್ತದೆ. ಪ್ರಸ್ತುತ ರಾಹು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ.
ಜ್ಯೋತಿಷ್ಯದಲ್ಲಿ ಬುಧನನ್ನು ತರ್ಕ, ಬುದ್ದಿವಂತಿಕೆ, ಸಂಪತ್ತು, ಹಣಕಾಸು, ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಎಂದರೆ ಮಾರ್ಚ್ 7, 2024 ರಂದು, ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಾರ್ಚ್ 26ರವರೆಗೆ ಬುಧನು ಮೀನ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ.
ಮೀನ ರಾಶಿಯಲ್ಲಿ ಬುಧನ ಪ್ರವೇಶದೊಂದಿಗೆ ಬುಧ-ರಾಹು ಸಂಯೋಗ ಉಂಟಾಗಲಿದೆ. ಇದರೊಂದಿಗೆ ಬರೋಬ್ಬರಿ 18 ವರ್ಷಗಳ ಬಳಿಕ ಈ ರಾಶಿಯಲ್ಲಿ ಬುಧ-ರಾಹುವಿನಿಂದ ಜಡತ್ವ ಯೋಗ ನಿರ್ಮಾಣವಾಗುತ್ತಿದೆ.
ಜ್ಯೋತಿಷ್ಯ ಹಾಸ್ತ್ರದ ಪ್ರಕಾರ, ಅಶುಭ ಯೋಗಗಳಲ್ಲಿ ಒಂದಾಗಿರುವ ಜಡತ್ವ ಯೋಗವು ದ್ವಾದಶ ರಾಶಿಯವರ ಮೇಲೆ ಪರಿಣಾಮವನ್ನು ಉಂಟು ಮಾಡಲಿದೆ. ಆದರೆ, ಈ ಮೂರು ರಾಶಿಯವರ ಜೀವನದಲ್ಲಿ ಅಶುಭ ಪರಿಣಾಮಗಳನ್ನು ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು, ಈ ಸಮಯದಲ್ಲಿ ಯಾರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯೋಣ...
ಬುಧ ರಾಹುವಿನ ಯುತಿಯಿಂದ ನಿರ್ಮಾಣವಾಗಿರುವ ಜಡತ್ವ ಯೋಗವು ಮಿಥುನ ರಾಶಿಯವರ ಜೀವನದಲ್ಲಿ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡಲಿದೆ. ಈ ಸಮಯದಲ್ಲಿ, ವ್ಯಾಪಾರಸ್ಥರು ಹೆಚ್ಚು ಜಾಗರೂಕರಾಗಿ ಇರುವುದು ಒಳ್ಳೆಯದು. ಇಲ್ಲದಿದ್ದರೆ, ಭಾರೀ ಹಣಕಾಸಿನ ನಷ್ಟ ಉಂಟಾಗಬಹುದು. ಉದ್ಯೋಗಸ್ಥರು ನಿಮ್ಮ ಹಿತ ಶತ್ರುಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ.
ರಾಹು-ಬುಧ ಯುತಿಯು ಸಿಂಹ ರಾಶಿಯ ಜನರಿಗೂ ಕೂಡ ಅಶುಭಕಾರಕ ಎಂದು ಸಾಬೀತುಪಡಿಸಬಹುದು. ಈ ಸಂದರ್ಭದಲ್ಲಿ ಉದ್ಯಮಿಗಳು ಯಾವುದೇ ದೊಡ್ಡ ವ್ಯವಹಾರಗಳಿಗೆ ಕೈ ಹಾಕದೇ ಇರುವುದು ಒಳ್ಳೆಯದು. ಹಳೆಯ ರೋಗಗಳು ಮರುಕಳಿಸಬಹುದಾದ್ದರಿಂದ ಎಚ್ಚರಿಕೆಯಿಂದ ಇರಿ.
ಬುಧ ರಾಹು ಸಂಯೋಗದಿಂದಾಗಿ ರೂಪುಗೊಳ್ಳಲಿರುವ ಜಡತ್ವ ಯೋಗವು ಕನ್ಯಾ ರಾಶಿಯವರ ಜೀವನದಲ್ಲಿ ತೊಂದರೆಗಳನ್ನು ಹೆಚ್ಚಿಸಬಹುದು. ಈ ವೇಳೆ, ವೃತ್ತಿ-ವ್ಯವಹಾರದಲ್ಲಿ ಏರಿಳಿತಗಳು ಹೆಚ್ಚಾಗಿ ಕಂಡು ಬರಲಿವೆ. ಕೌಟುಂಬಿಕ ಒತ್ತಡದಿಂದಾಗಿ ಆರೋಗ್ಯವೂ ಹದಗೆಡಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.