ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಪಾರಾಗಲು ಇಂದಿನಿಂದಲೇ ನಿಮ್ಮ ಆಹಾರದಲ್ಲಿರಲಿ ಈ 5 ಆರೋಗ್ಯಕರ ಎಣ್ಣೆ
ಆಲಿವ್ ಎಣ್ಣೆ: ತುಂಬಾ ಪೌಷ್ಟಿಕಾಂಶವೆಂದು ಪರಿಗಣಿಸಲಾಗಿರುವ ಆಲಿವ್ ಎಣ್ಣೆಯು ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಆಲಿವ್ ಎಣ್ಣೆ ಬಳಸಿ ಮಧ್ಯಮ ಉರಿಯಲ್ಲಿ ಆಹಾರ ತಯಾರಿಸುವುದರಿಡ್ನ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
ಕಡಲೆಕಾಯಿ ಎಣ್ಣೆ: ಮಾಂಸಾಹಾರ ತಯಾರಿಕೆಗೆ ಕಡಲೆಕಾಯಿ ಎಣ್ಣೆಯನ್ನು ಹೆಚ್ಚು ಸೂಕ್ತ ಎಂದು ಪರಿಗಣಿಸಲಾಗುತ್ತದೆ.
ಎಳ್ಳಿನ ಎಣ್ಣೆ: ಉತ್ತಮ ಆರೋಗ್ಯಕ್ಕೆ ಎಳ್ಳೆಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಈ ಎಣ್ಣೆ ರುಚಿಕರ ಮಾತ್ರವಲಾಲ್ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಕೂಡ ಪ್ರಯೋಜನಕಾರಿ ಆಗಿದೆ.
ಆವಕಾಡೊ ಎಣ್ಣೆ: ಆವಕಾಡೊ ಹಣ್ಣಿನ ತಿರುಲತ್ತು ಒತ್ತಿ ತಯಾರಿಸಲ್ಪಡುವ ಈ ಎಣ್ಣೆಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಚಿಯಾ ಸೀಡ್ಸ್ ಆಯಿಲ್: ಚಿಯಾ ಸೀಡ್ಸ್ ಆಯಿಲ್ ನಲ್ಲಿ ಆಲ್ಫಾ-ಲಿನೋಲೆನಿಕ್ ಆಮ್ಲ ಹೇರಳವಾಗಿ ಕಂಡು ಬರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಅಗತ್ಯವಾದ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.