ದಿನನಿತ್ಯ ಐದಾರು ಎಸಳು ಪುದೀನಾ ತಿನ್ನಿ… ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು
ಪುದೀನಾದಲ್ಲಿರುವ ಪೋಷಕಾಂಶಗಳ ಬಗ್ಗೆ ನಿಮಗೆ ತಿಳಿದಿದೆಯೇ?ಎಲ್ಲಾ ಪೌಷ್ಟಿಕಾಂಶದ ಮೌಲ್ಯಗಳು ಪುದೀನದಲ್ಲಿವೆ ಎಂದರೆ ನಂಬುತ್ತೀರಾ? ಹೌದು ಪುದೀನಾವನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವರದಿಯಲ್ಲಿ ತಿಳಿದುಕೊಳ್ಳೋಣ.
ಪುದೀನಾ ಮನಸ್ಸನ್ನು ಶಾಂತಗೊಳಿಸುವ ಗುಣಗಳನ್ನು ಹೊಂದಿದೆ. ಇದೇ ಕಾರಣದಿಂದ ಪುದೀನಾವನ್ನು ಅರೋಮಾಥೆರಪಿಯಲ್ಲಿ ಬಳಸಲಾಗುತ್ತದೆ.
ಪುದೀನಾ ರೋಗನಿರೋಧಕ ಶಕ್ತಿಯಲ್ಲಿ ಸಮೃದ್ಧವಾಗಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಇದು ಪರಿಹಾರವನ್ನು ನೀಡುತ್ತದೆ. ಅಂದರೆ ಶೀತ, ಕೆಮ್ಮು ಮತ್ತು ಗಂಟಲು ನೋವನ್ನು ಕಡಿಮೆ ಮಾಡಲು ಇದು ಬೆಸ್ಟ್ ಮನೆಮದ್ದು.
ಪುದೀನಾವನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಹೊಟ್ಟೆ ನೋವು, ಅಸಿಡಿಟಿ ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ.
ಕೆಲವರಿಗೆ ಬಾಯಿ ದುರ್ವಾಸನೆ ಇರುತ್ತದೆ. ಪ್ರಯತ್ನ, ಪ್ರಯೋಗಗಳ ಹೊರತಾಗಿಯೂ ಎಫೆಕ್ಸ್ ಇರುವುದಿಲ್ಲ. ಹೀಗಿದ್ದಾಗ ಬೆಳಿಗ್ಗೆ ಎರಡು ಪುದೀನ ಎಲೆಗಳನ್ನು ಚೆನ್ನಾಗಿ ಅಗಿಯಿರಿ. ಇದು ಬಾಯಿಯ ದುರ್ವಾಸನೆ ಹೋಗಲಾಡಿಸುವುದು ಮಾತ್ರವಲ್ಲದೆ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
ಪುದೀನಾ ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಪುದೀನಾದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಕ್ಯಾರೋಟಿನ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ ಕೂದಲು ಉದುರುವುದನ್ನು ತಡೆಯುತ್ತದೆ.
ಪುದೀನಾದಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸುತ್ತದೆ. ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳನ್ನು ಸಹ ತಡೆಯುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)