IND vs NZ: ಅಯ್ಯರ್, ಕೊಹ್ಲಿ ಶತಕ ಅಲ್ಲ, ಪಂದ್ಯದ ದಿಕ್ಕು ಬದಲಿಸಿದ್ದು ಈ ಒಂದು ಬಾಲ್ !
ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಬಿರುಸಿನ ಬ್ಯಾಟಿಂಗ್ ನಡೆಸಿದರು. ನಾಯಕ ರೋಹಿತ್ ಶರ್ಮಾ (47) ಶುಭಮನ್ ಗಿಲ್ (80*) ಜತೆಗೂಡಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇದಾದ ಬಳಿಕ ವಿರಾಟ್ ಕೊಹ್ಲಿ (117) ಮತ್ತು ಶ್ರೇಯಸ್ ಅಯ್ಯರ್ (105) ಶತಕ . ಅ ಇನ್ನು ಕೊನೆಯ ಓವರ್‌ಗಳಲ್ಲಿ ಕೆಎಲ್ ರಾಹುಲ್ (39*) ಸಂಚಲನ ಮೂಡಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಬೀಸಿದ ಶಮಿ ಬಿರುಗಾಳಿಯನ್ನು ತಂಡದ ಆಟಗಾರರು ಮತ್ತು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. 7 ಕಿವೀಸ್ ಬ್ಯಾಟ್ಸ್‌ಮನ್‌ಗಳನ್ನು ಒಬ್ಬರ ಹಿಂದೆ ಒಬ್ಬರನ್ನು ಪೆವಿಲಿಯನ್ ಗೆ ಅಟ್ಟಿದ ರೀತಿ ಅಮೋಘ. ನ್ಯೂಜಿಲೆಂಡ್‌ಗೆ ಶಮಿ ಮೊದಲೇ ಎರಡು ಆಘಾತ ನೀಡಿದ್ದರು. ಟಾಪ್-5 ಬ್ಯಾಟ್ಸ್‌ಮನ್‌ಗಳನ್ನು ತಮ್ಮದೇ ಎಸೆತಗಳಲ್ಲಿ ಔಟ್ ಮಾಡಿದ್ದು ಶಮಿಯ ಮತ್ತೊಂದು ಸಾಧನೆ. ಈ ಪ್ರದರ್ಶನಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
ಭಾರತ ನೀಡಿದ 398 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಇದಾದ ಬಳಿಕ ಡ್ಯಾರಿಲ್ ಮಿಚೆಲ್ (131) ಮತ್ತು ಕೇನ್ ವಿಲಿಯಮ್ಸನ್ (79) ಮೂರನೇ ವಿಕೆಟ್‌ಗೆ 181 ರನ್‌ಗಳ ದೊಡ್ಡ ಜೊತೆಯಾಟವಾಡಿದರು. ಇನಿಂಗ್ಸ್‌ನ 33ನೇ ಓವರ್ ಪಂದ್ಯದ ದೊಡ್ಡ ತಿರುವು. ಈ ಓವರ್ ನಲ್ಲಿ ಶಮಿ ಮೊದಲು ಕಿವೀಸ್ ನಾಯಕ ವಿಲಿಯಮ್ಸನ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಇದಾದ ಬಳಿಕ ಓವರ್‌ನ ನಾಲ್ಕನೇ ಎಸೆತದಲ್ಲಿ ಟಾಮ್ ಲ್ಯಾಥಮ್ ಖಾತೆ ತೆರೆಯದೆ ನಿರ್ಗಮಿಸಿದರು. ಬಳಿಕ ಟೀಂ ಇಂಡಿಯಾ ಬೌಲರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್‌ಗಳನ್ನು ಕಬಳಿಸುತ್ತಾ ಸಾಗಿದರು. ನ್ಯೂಜಿಲೆಂಡ್ ತಂಡ 327 ರನ್‌ಗಳಿಗೆ ಆಲೌಟ್ ಆಗಿತ್ತು.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ವಿಶ್ವಕಪ್ 2023 ರ ಎರಡನೇ ಸೆಮಿಫೈನಲ್‌ನ ವಿಜೇತ ತಂಡವನ್ನು ಟೀಮ್ ಇಂಡಿಯಾ ಎದುರಿಸಲಿದೆ. ಈ ಪಂದ್ಯ ನವೆಂಬರ್ 19 ರಂದು ಅಹಮದಾಬಾದ್‌ನ ಪ್ರತಿಷ್ಠಿತ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.