India @75: ಭಾರತದ ಬಗ್ಗೆ ನಿಮಗೆ ಗೊತ್ತಿಲ್ಲದ ಅದ್ಭುತ ಸಂಗತಿಗಳು…

Thu, 12 Aug 2021-3:21 pm,

ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳು ಭಾರತದಲ್ಲಿ ಜನಪ್ರಿಯವಾಗಿವೆ. ಭಾರತದಲ್ಲಿ ನೂರಾರು ಭಾಷೆಗಳಿವೆ. ಇಲ್ಲಿನವರು ಅಮೆರಿಕನ್ ಇಂಗ್ಲಿಷ್ ಅನ್ನು ಸಾಮಾನ್ಯವಾಗಿ ಮಾತನಾಡುತ್ತಾರೆ. ಇಲ್ಲಿ ಸುಮಾರು 250 ಮಿಲಿಯನ್ ಜನರು ಇಂಗ್ಲಿಷ್ ಮಾತನಾಡುತ್ತಾರೆ ಎಂದು ಅಂದಾಜಿಸಲಾಗಿದೆ. ಭಾರತವು ವಿಶ್ವದಲ್ಲೇ ಅತಿಹೆಚ್ಚು ಇಂಗ್ಲಿಷ್ ಮಾತನಾಡುವ ಜನರು ಇರುವ 2ನೇ ದೇಶವಾಗಿದೆ.

2014 ಮತ್ತು 2018ರ ನಡುವೆ ಪ್ರಪಂಚದಾದ್ಯಂತ ಜನರು ಸಸ್ಯಾಹಾರದತ್ತ ಮುಖ ಮಾಡುತ್ತಿದ್ದಾರೆ ಎಂದು ಕಳೆದ ವರ್ಷ ಗೂಗಲ್ ಟ್ರೆಂಡ್‌ಗಳಿಂದ ಹುಡುಕಾಟ ನಡೆಸಿದ ಡೇಟಾ ಹೇಳಿದೆ. ನಮ್ಮ ದೇಶದಲ್ಲಿ ಲಕ್ಷಾಂತರ ಮಾಂಸಾಹಾರಿಗಳಿದ್ದರೂ, ಭಾರತವು ವಿಶ್ವದ ಅತಿದೊಡ್ಡ ಸಸ್ಯಾಹಾರಿ ದೇಶವಾಗಿದೆ. ಯಾವುದೇ ದೇಶವನ್ನು ತೆಗೆದುಕೊಂಡರೂ ಅಲ್ಲಿ ಸಸ್ಯಾಹಾರಿಗಳಿಗಿಂತ ಮಾಂಸಹಾರಿಗಳೇ ಹೆಚ್ಚಾಗಿದ್ದಾರೆ.  ಆದರೆ ನಮ್ಮ ದೇಶದ ಜನಸಂಖ್ಯೆಯ ಶೇ .50 ರಷ್ಟು ಜನರು ಸಸ್ಯಾಹಾರಿಗಳಾಗಿದ್ದಾರೆ ಎಂದು ಅಂದಾಜಿಸಲಾಗಿದೆ. 2ನೇಯ ದೇಶ ಇಸ್ರೇಲ್ ಆಗಿದ್ದು, ಅಲ್ಲಿ ಶೇ.13 ರಷ್ಟು ಜನರು ಸಸ್ಯಾಹಾರ ಅವಲಂಬಿಸಿದ್ದಾರೆ ಎಂದು ತಿಳಿದುಬಂದಿದೆ.

ಭಾರತವು ವೈವಿಧ್ಯಮಯ ದೇಶವಾಗಿದ್ದು, ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳ ಜನರು ಶಾಂತಿಯುತವಾಗಿ ಬದುಕುತ್ತಿದ್ದಾರೆ.

ಭಾರತವು ವಿಶ್ವದ 2ನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಪ್ರಸ್ತುತ ಭಾರತದ ಜನಸಂಖ್ಯೆ ಸುಮಾರು 135 ಕೋಟಿ ಎಂದು ಪರಿಗಣಿಸಲಾಗಿದೆ. ಕೊರೊನಾ ಸಾಂಕ್ರಾಮಿಕದಿಂದ ಗಣತಿ ಕಾರ್ಯ ನಿಲ್ಲಿಸಿದ್ದರೂ, ದೇಶದಲ್ಲಿ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಒಂದು ವರದಿಯ ಪ್ರಕಾರ ಇನ್ನು ಕೆಲವೇ ವರ್ಷಗಳಲ್ಲಿ ಜನಸಂಖ್ಯೆಯ ದೃಷ್ಟಿಯಿಂದ ಭಾರತವು ಚೀನಾವನ್ನು ಹಿಂದಿಕ್ಕಲಿದೆ ಅಂತಾ ಹೇಳಲಾಗಿದೆ.

ಈಶಾನ್ಯ ಹಿಂದೂ ಮಹಾಸಾಗರದ ಬಂಗಾಳ ಕೊಲ್ಲಿಯಲ್ಲಿರುವ ಉತ್ತರ ಸೆಂಟಿನೆಲ್ ದ್ವೀಪದಲ್ಲಿ ವಾಸಿಸುವ ಸ್ಥಳೀಯ ಜನರು ಪ್ರಾಚೀನ ಬುಡಕಟ್ಟಿಗೆ ಸೇರಿದವರಾಗಿದ್ದಾರೆ. ಇವರನ್ನು ಸೆಂಟಿನೆಲ್ ದ್ವೀಪವಾಸಿಗಳು ಎಂದೂ ಕರೆಯುತ್ತಾರೆ. ಇವರು ಯಾವಾಗಲೂ ಪ್ರಾಚೀನ ಈಟಿಗಳು, ಬಿಲ್ಲು ಮತ್ತು ಬಾಣಗಳಿಂದ ಶಸ್ತ್ರಸಜ್ಜಿತವಾಗಿರುತ್ತಾರೆ. ಈ ಬೇಟೆಗಾರ ಸೆಂಟಿನೆಲ್ ದ್ವೀಪವಾಸಿಗಳು ವಿಶ್ವದ ಕೊನೆಯ ನವಶಿಲಾಯುಗದ ಪೂರ್ವ ಬುಡಕಟ್ಟು ಎಂದು ಪರಿಗಣಿಸಲಾಗಿದೆ. ಇವರು ಹೊರಪ್ರಪಂಚದೊಂದಿಗೆ ಯಾವುದೇ ಸಂಪರ್ಕವನ್ನಿಟ್ಟುಕೊಳ್ಳದೆ ಪ್ರತ್ಯೇಕವಾಗಿ ದ್ವೀಪ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇದಲ್ಲದೆ ಭಾರತದ ವಿವಿಧ ಪ್ರದೇಶಗಳಲ್ಲಿ ಅನೇಕ ರೀತಿಯ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ.

ಪ್ರಾಚೀನ ಕಾಲದಿಂದಲೂ ಭಾರತವು ಪ್ರಪಂಚದ ಎಲ್ಲಾ ಪ್ರಸಿದ್ಧ ವಜ್ರಗಳ ಮೂಲವಾಗಿತ್ತು. 1896ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಜ್ರಗಳು ಪತ್ತೆಯಾಗುವವರೆಗೂ ಭಾರತವು ವಜ್ರಗಳನ್ನು ಗಣಿಗಾರಿಕೆ ಮಾಡಿದ ಏಕೈಕ ಪ್ರದೇಶವಾಗಿತ್ತು.

ಭಾರತದ ಕೆಲವು ರಾಜ್ಯಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರು ಮೀಸೆ ಬಿಟ್ಟರೆ ವಿಶೇಷವಾಗಿ ‘ಮೀಸೆ ಭತ್ಯೆ’ಯನ್ನು ನೀಡಲಾಗುತ್ತದೆ. ದಪ್ಪದಾಗಿ ಮೀಸೆ ಬಿಟ್ಟು ಅದನ್ನು ಸರಿಯಾಗಿ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಹಣ ನೀಡುವ ಪದ್ಧತಿ ಜಾರಿಯಲ್ಲಿದೆ.  

ಬೀಜಗಣಿತ, ತ್ರಿಕೋನಮಿತಿ ಮತ್ತು ಸಂಕಲನಶಾಸ್ತ್ರ ಭಾರತದಲ್ಲಿ ಹುಟ್ಟಿಕೊಂಡಿವೆ. ಚತುರ್ಭುಜ ಸಮೀಕರಣಗಳನ್ನು ಶ್ರೀಧರಾಚಾರ್ಯರು 11ನೇ ಶತಮಾನದಲ್ಲಿ ಬಳಸಿದಿದ್ದರು. ಗಣಿತದ ಪ್ರತಿಭೆಗಳಿಗೆ ವಿಶ್ವದಲ್ಲಿ ಭಾರತವೇ ದೊಡ್ಡ ಆಗರವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link