India Post: ಜಬರ್ದಸ್ತ್ ರಿಟರ್ನ್ ಸಂಪಾದಿಸಲು ಅಂಚೆ ಕಚೇರಿಯ ಈ ನಾಲ್ಕು ಯೋಜನೆಗಳಲ್ಲಿ ಹಣ ಹೂಡಿಕೆ ಉತ್ತಮ
1. Time Deposit: ಟೈಮ್ ಡಿಪಾಸಿಟ್ ಅಥವಾ ಎಫ್.ಡಿಯಲ್ಲಿ ಹಣ ಹೂಡಿಕೆಯ ಗರಿಷ್ಟ ಮಿತಿ ನಿಗದಿಪಡಿಸಲಾಗಿಲ್ಲ. ಪೋಸ್ಟ್ ಆಫೀಸ್ ಟೈಮ್ ನ ಡಿಪಾಸಿಟ್ ಅಡಿ 5 ವರ್ಷಗಳ ಹೂಡಿಕೆಯ ಮೇಲೆ ಶೇ.6.7 ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಒಂದು ವೇಳೆ ಟೈಮ್ ಡಿಪಾಸಿಟ್ ನಲ್ಲಿ ನೀವು 15 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ ವಾರ್ಷಿಕ ಶೇ.6.7ರ ಬಡ್ಡಿ ದರದಲ್ಲಿ ನೀವು 30 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಬಹುದು.
2. National Saving Certificate - ನೀವು NSC ಯಲ್ಲಿ ಹೂಡಿಕೆ ಮಾಡಿದರೆ, ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ವಾರ್ಷಿಕವಾಗಿ 1.5 ಲಕ್ಷ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಪಡೆಯಬಹುದು. ಇದು ಐದು ವರ್ಷಗಳ ಮೆಚುರಿಟಿ ಅವಧಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ವರ್ಷಕ್ಕೆ ಶೇ.6.8ರಷ್ಟು ಬಡ್ಡಿ ಸಿಗುತ್ತಿದೆ. ಬಡ್ಡಿದರದ ಬಗ್ಗೆ ಹೇಳುವುದಾದರೆ, ಇತರ ಸಣ್ಣ ಉಳಿತಾಯ ಯೋಜನೆಗಳಲ್ಲಿ, ಬಡ್ಡಿದರವನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲಿಸಲಾಗುತ್ತದೆ, ಆದರೆ NSC ನಲ್ಲಿ ಮಾಡುವ ಹೂಡಿಕೆಯ ಮೇಲಿನ ಬಡ್ಡಿದರವು ಸಂಪೂರ್ಣ ಮೆಚ್ಯೂರಿಟಿ ಅವಧಿಗೆ ಒಂದೇ ಆಗಿರುತ್ತದೆ.
3. Recurring Deposit - ನೀವು ಮಾಸಿಕ ರೂಪದಲ್ಲಿ RD ಖಾತೆಯಲ್ಲಿ ಯಾವುದೇ ಗರಿಷ್ಠ ಮೊತ್ತವನ್ನು ಠೇವಣಿ ಮಾಡಬಹುದು. ಇದರಲ್ಲಿ ಯಾವುದೇ ಮಿತಿಯನ್ನು ನಿಗದಿಪಡಿಸಿಲ್ಲ. ಇಲ್ಲಿ ನೀವು ಪಿಪಿಎಫ್‌ಗೆ ಸಮಾನವಾಗಿ ಪ್ರತಿ ತಿಂಗಳು 12500 ಹೂಡಿಕೆ ಮಾಡಿದರೆ, ದೊಡ್ಡ ನಿಧಿಯೇ ನಿಮ್ಮ ಕೈ ಸೇರುತ್ತದೆ. ಎಷ್ಟು ಬೇಕಾದಷ್ಟು ವರ್ಷಗಳವರೆಗೆ ನೀವು ಆರ್‌ಡಿಯಲ್ಲಿ ಹೂಡಿಕೆ ಮಾಡಬಹುದು. ಇದು ವಾರ್ಷಿಕವಾಗಿ ಶೇ. 5.8 ಕಂಪೌಂಡ್ ಇಂಟರೆಸ್ಟ್ ನೀಡುತ್ತದೆ. ನೀವು ವಾರ್ಷಿಕವಾಗಿ ಗರಿಷ್ಟ 1,50,000 ರೂ.ಗಳ ಹೂಡಿಕೆ ಮಾಡಿದರೆ, ಚಕ್ರಬಡ್ಡಿಯ ಲೆಕ್ಕಾಚಾರದಲ್ಲಿ 27 ವರ್ಷಗಳಲ್ಲಿ ನೀವು ಈ ಯೋಜನೆಯಲ್ಲಿ ಸುಮಾರು 99 ಲಕ್ಷ ರೂ. ಗಳನ್ನೂ ಸಂಪಾದಿಸಬಹುದು. ಇದರಲ್ಲಿ ನಿಮ್ಮ ಒಟ್ಟು ಹೂಡಿಕೆ 40,50,000 ಇರಲಿದೆ.
4. Public Provident Fund - ಪಿಪಿಎಫ್‌ನಲ್ಲಿ ಹೂಡಿಕೆದಾರರು ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂ. ಹೂಡಿಕೆಯನ್ನು ಮಾಡಬಹುದು. ಮಾಸಿಕ ರೂಪದಲ್ಲಿ ನೀವು ಇದರಲ್ಲಿ ಗರಿಷ್ಠ ಅಂದರೆ, 12,500 ಹೂಡಿಕೆ ಮಾಡಬೇಕು. ಈ ಯೋಜನೆಯ ಮ್ಯಾಚೂರಿಟಿ ಅವಧಿ 15 ವರ್ಷಗಳು, ಅದನ್ನು ನೀವು ಇನ್ನೂ 5 ರಿಂದ 5 ವರ್ಷಗಳವರೆಗೆ ವಿಸ್ತರಿಸಬಹುದು. ಈ ಯೋಜನೆಯಲ್ಲಿ, ಪ್ರಸ್ತುತ, ವಾರ್ಷಿಕ ಬಡ್ಡಿಯು ಶೇಕಡಾ 7.1 ರಷ್ಟಿದೆ. ನೀವು ಪ್ರತಿ ವರ್ಷಕ್ಕೆ 1.5 ಲಕ್ಷ ಹೂಡಿಕೆ ಮಾಡಿದರೆ, 25 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ 37,50,000 ರೂ. ಆಗಲಿದ್ದು, 25 ವರ್ಷಗಳ ಮುಕ್ತಾಯದ ನಂತರ ಚಕ್ರಬಡ್ಡಿಯ ಲಾಭ ಸೇರಿದಂತೆ ನಿಮ್ಮ ಕೈಗೆ 1.03 ಕೋಟಿ ರೂ.ಸೇರುತ್ತದೆ.
5. ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ - ಭಾರತೀಯ ಅಂಚೆ ಇಲಾಖೆ ನಡೆಸುವ ಈ 4 ಯೋಜನೆಗಳು ಅದ್ಭುತ ಲಾಭವನ್ನು ನೀಡುತ್ತವೆ. PPF, RD, NSC, TD ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಹೂಡಿಕೆದಾರರು ಕೆಲವೇ ವರ್ಷಗಳಲ್ಲಿ ಮಿಲಿಯನೇರ್ ಆಗಬಹುದು.