ಕ್ರಿಕೆಟಿಗರ ಮಕ್ಕಳ ವಿಶಿಷ್ಟ ಹೆಸರುಗಳು ನಿಮಗೆ ಗೊತ್ತಿದೆಯಾ..?
ಹಾಗಾದರೆ ವಿರೂಷ್ಕಾ ಬೇಬಿ ವಮಿಕಾ ಹೆಸರಿನ ಅರ್ಥ ಏನು.?. ವಮಿಕಾ ಎಂದರೆ ತಾಯಿ ದುರ್ಗೆಯ ರೂಪ ಎಂದು ಹೇಳಲಾಗುತ್ತದೆ. ಶಿವನ ಒಡನಾಡಿ ಎಂಬ ಅರ್ಥವೂ ಇದೆ. ಶಿವನ ವಾಮ ಭಾಗ ಅಂದರೆ ಎಡ ಭಾಗದಲ್ಲಿ ನಿಲ್ಲುವವರು ವಮಿಕಾ. ವ್ಯಕ್ತಿಯ ವಾಮ ಭಾಗದಲ್ಲಿ ನಿಲ್ಲುವುದು ಸಂಗಾತಿ ಮಾತ್ರ.
ಎಂ.ಎಸ್.ಧೋನಿ ಮತ್ತು ಸಾಕ್ಷಿ ಧೋನಿ ದಂಪತಿಯ ಮುದ್ದಿನ ಮಗಳ ಹೆಸರು 'ಜೀವ'. ಜೀವ ಎಂಬುದು ಪಾರ್ಸಿ ಪದವಾಗಿದ್ದು ಇದರ ಅರ್ಥ ಸೌಂದರ್ಯ, ಹೊಳಪು, ಕುಶಾಗ್ರಮತಿ ಮತ್ತು ಹಿಂದಿಯಲ್ಲಿ ಬೆಳಕು.
ಭಾರತೀಯ ಕ್ರಿಕೆಟಿಗ ಮತ್ತು ಸಂಸದ ಗೌತಮ್ ಗಂಭೀರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಅವರ ಹೆಸರು ಅಜಿನ್ ಮತ್ತು ಅನೈಜಾ. ಈ ಎರಡೂ ಹೆಸರುಗಳು ಅರೇಬಿಕ್. ಅರೆಬಿಕ್ ನಲ್ಲಿ ಅಜಿನ್ ಎಂದರೆ ಸೌಂದರ್ಯ.
ಫಾಸ್ಟ್ ಬೌಲರ್ ಆಶಿಶ್ ನೆಹ್ರಾ ಮತ್ತು ರಶ್ಮಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವನ ಮಗಳ ಹೆಸರು ಅರಿಯಾನಾ. ಅರಿಯಾನ ಎಂದರೆ ಜೀವನದಿಂದ ತುಂಬಿರುವಂತದ್ದು. ಶುದ್ಧ ಅಥವಾ ಪವಿತ್ರ.
ಸುರೇಶ್ ರೈನಾ ಮತ್ತು ಪ್ರಿಯಾಂಕಾ ಚೌಧರಿ 2016 ರಲ್ಲಿ ಸತಿಪತಿಯರಾದರು. ಅವರ ಮಗಳ ಹೆಸರು ಗ್ರೇಸಿಯಾ. ಈ ಪದದ ಅರ್ಥ ದೇವರ ಅನುಗ್ರಹ.
ಇನ್ನು ಟೀಂ ಇಂಡಿಯಾದ ಬೌಲರ್ ಆರ್ ಅಶ್ವಿನ್ ಅವರಿಗೂ ಇಬ್ಬರು ಹೆಣ್ಣುಮಕ್ಕಳು. ಒಬ್ಬರ ಹೆಸರು ಆದ್ಯ . ಆದ್ಯ ಎಂದರೆ, ದೇವಿ ದುರ್ಗೆ ಎಂದರ್ಥ. ನ್ನೊಬ್ಬ ಮಗಳ ಹೆಸರು ಅಖಿರಾ ಅಂದರೆ ಗಣೇಶ..
ಅನಿಲ್ ಕುಂಬ್ಳೆ ವಿಚ್ಛೇದನವಾಗಿದ್ದ ಚೇತನ ಅವರನ್ನು ವಿವಾಹವಾಗಿದ್ದರು. ಇದರೊಂದೊಗೆ ಅನಿಲ್ ಕುಂಬ್ಳೆ ಚೇತನಾ ಅವರ ಪುತ್ರಿ ಆರೂನಿ ಅವರನ್ನು ದತ್ತು ಸ್ವೀಕರಿಸಿದ್ದು ಮಾತ್ರವಲ್ಲ ಅವರಿಗೆ ತಮ್ಮ ಹೆಸರನ್ನೂ ನೀಡಿದ್ದಾರೆ. ಇದಲ್ಲದೆ, ಕುಂಬ್ಳೆಗೆ ಮಯಾಸ್ ಕುಂಬ್ಳೆ ಮತ್ತು ಸ್ವಾಸ್ಥಿ ಎಂಬ ಬ್ಬರು ಮಕ್ಕಳಿದ್ದಾರೆ.