ಪಾಕ್ ವಿರುದ್ಧ ಗೆದ್ದು ‘ಜೈ ಶ್ರೀಹನುಮಾನ್’ ಪೋಸ್ಟ್ ಹಾಕಿದ್ದ ಕೇಶವ್ ಮಹಾರಾಜ್ ಅವರ ಪತ್ನಿ ಭಾರತದ ಖ್ಯಾತ ಡ್ಯಾನ್ಸರ್! ಯಾರು ಗೊತ್ತಾ ಆ ಬ್ಯೂಟಿ?

Sun, 05 Nov 2023-11:33 pm,

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಉಪನಾಯಕ ಕೇಶವ್ ಮಹಾರಾಜ್ ಭಾರತೀಯ ಮೂಲದವರು. ಅವರ ಮುತ್ತಜ್ಜ ಉತ್ತರ ಪ್ರದೇಶದ ಸುಲ್ತಾನ್‌’ಪುರದಲ್ಲಿ ವಾಸವಾಗಿದ್ದರು.

ಆದರೆ ಆ ಬಳಿಕ ಡರ್ಬನ್‌’ಗೆ ವಲಸೆ ಬಂದು ಅಲ್ಲಿ ನೆಲೆಸಿದರು. ಕೇಶವ್ ಮಹಾರಾಜ್ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ ಬೆಳೆದರೂ ಕೂಡ ತನ್ನ ಮೂಲ ದೇಶವಾದ ಭಾರತದ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದಾರೆ.

ಇನ್ನು ಕೇಶವ್ ಅವರು ಭಾರತ ಮೂಲದ ಲೆರಿಶಾ ಮುನ್ಸಾಮಿ ಅವರನ್ನು ವಿವಾಹವಾಗಿದ್ದಾರೆ. ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡಿದ ಈ ಜೋಡಿ ನಂತರ ಏಪ್ರಿಲ್ 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಲೆರಿಶಾ ಪ್ರತಿಭಾವಂತ ಮತ್ತು ಖ್ಯಾತ ಕಥಕ್ ನೃತ್ಯಗಾರ್ತಿಯೂ ಹೌದು. ಮೊದಲಿಗೆ ಸ್ನೇಹಿತರಾಗಿದ್ದ ಈ ಜೋಡಿ ಆ ಬಳಿಕ ಪ್ರೀತಿಸಿ ಇದೀಗ ಮದುವೆಯಾಗಿದ್ದಾರೆ.  

ಲೆರಿಶಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದು, ಆಗಾಗ್ಗೆ ಇವರಿಬ್ಬರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link