ಈ ಬಾರಿ ವಿಶ್ವಕಪ್‌ನಲ್ಲಿ ಬೇರೆ ತಂಡಗಳ ಪರ ಆಡುತ್ತಿರುವ ಭಾರತ ಮೂಲದ ಆಟಗಾರರು ಇವರು.!
ವಿಕ್ರಮಜಿತ್ ಸಿಂಗ್: ನೆದರ್ಲ್ಯಾಂಡ್ಸ್ ಮೂಲದ ಕ್ರಿಕೆಟಿಗ ವಿಕ್ರಮಜಿತ್ ಸಿಂಗ್ ಅವರು ಭಾರತದ ಪಂಜಾಬ್‌ನ ಚೀಮಾ ಖುರ್ದ್‌ನಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಅವರ ಅಜ್ಜ, ಖುಷಿ ಚೀಮಾ, 1984 ರ ಸಿಖ್ ವಿರೋಧಿ ದಂಗೆಯ ನಂತರ ನೆದರ್ಲ್ಯಾಂಡ್ಸ್‌ಗೆ ಹೋದರು.
ತೇಜ ನಿಡಮನೂರು: ಭಾರತದ ವಿಜಯವಾಡದಲ್ಲಿ ಜನಿಸಿದ ತೇಜ ನಿಡಮನೂರು ನೆದರ್ಲೆಂಡ್ಸ್ ಕ್ರಿಕೆಟ್ ತಂಡದಲ್ಲಿ ಆಡುತ್ತಾರೆ. ಅವರು ಡಚ್ ತಂಡದ ನಿರ್ಣಾಯಕ ಸದಸ್ಯರಾಗಿದ್ದಾರೆ.
ರಚಿನ್ ರವೀಂದ್ರ: ರಚಿನ್ ಪೋಷಕರು ಭಾರತೀಯ ಮೂಲದವರು. ವೆಲ್ಲಿಂಗ್ಟನ್‌ನಲ್ಲಿ ಜನಿಸಿದರು ಆದರೆ ರಚಿನ್ ಮೂಲತಃ ಬೆಂಗಳೂರಿನವರು. ತಂದೆ 1997 ರಲ್ಲಿ ನ್ಯೂಜಿಲೆಂಡ್‌ಗೆ ಶಿಫ್ಟ್ ಆದರು. ಬೆಂಗಳೂರಿನಲ್ಲಿ ಕ್ಲಬ್ ಮಟ್ಟದ ಕ್ರಿಕೆಟಿಗರಾಗಿದ್ದರು.
ಕೇಶವ ಮಹಾರಾಜ್: ದಕ್ಷಿಣ ಆಫ್ರಿಕಾ ಮೂಲದ ಸ್ಪಿನ್ನರ್ ಕೇಶವ್ ಮಹಾರಾಜ್ ಭಾರತೀಯ ಪೋಷಕರಾದ ಆತ್ಮಾನಂದ ಮಹಾರಾಜ್ ಮತ್ತು ಕಾಂಚನ್ ಮಾಲಾ ಅವರ ಪುತ್ರ. ಭಾರತದ ಉತ್ತರ ಪ್ರದೇಶದ ಸುಲ್ತಾನ್‌ಪುರ ಇವರ ಮೂಲ. ಅವರ ಮುತ್ತಜ್ಜ ಅಲ್ಲಿ ವಾಸಿಸುತ್ತಿದ್ದರು.
ಇಶ್ ಸೋಧಿ: ನ್ಯೂಜಿಲೆಂಡ್‌ನ ಸ್ಪಿನ್ನರ್ ಇಶ್ ಸೋಧಿ ಭಾರತೀಯ ಪಂಜಾಬಿ ಮೂಲದವರು. ಅವರು ಲುಧಿಯಾನದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದರು. ಅವರು ನಾಲ್ಕು ವರ್ಷದವರಾಗಿದ್ದಾಗ ತಮ್ಮ ಕುಟುಂಬದೊಂದಿಗೆ ನ್ಯೂಜಿಲೆಂಡ್‌ಗೆ ಸ್ಥಳಾಂತರಗೊಂಡರು.
ಆರ್ಯನ್ ದತ್: ಹೇಗ್‌ನಲ್ಲಿ ಹುಟ್ಟಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಬೆಳೆದ ಆರ್ಯನ್ ದತ್ ನೆದರ್‌ಲ್ಯಾಂಡ್ಸ್ ತಂಡಕ್ಕಾಗಿ ಆಡುವ ಭಾರತೀಯ ಮೂಲದ ಆಟಗಾರ. ಬಲಗೈ-ಆಫ್ ಸ್ಪಿನ್ನರ್ ಆಗಿ, ಅವರು ಸೊಗಸಾದ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಅವರ ತಂದೆ ಭಾರತದ ಪಂಜಾಬ್‌ನ ಹೋಶಿಯಾರ್‌ಪುರದವರು.