ಬೆಂಗಳೂರಿನಲ್ಲೇ ಇರುವ ಭಾರತದ ಮೊದಲ AC ರೈಲ್ವೆ ಸ್ಟೇಷನ್ ಹೀಗಿದೆ ನೋಡಿ..!
ದೇಶದ ಮೊದಲ ಕೇಂದ್ರೀಕೃತ ಹವಾನಿಯಂತ್ರಿತ ರೈಲ್ವೆ ನಿಲ್ದಾಣಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಎಂದು ಹೆಸರಿಸಲಾಗಿದೆ. ಇದನ್ನು ಬೆಂಗಳೂರಿನಲ್ಲಿ ನಿರ್ಮಿಸಲಾಗಿದೆ. ಈ ಹವಾನಿಯಂತ್ರಿತ ಟರ್ಮಿನಲ್ ಬಹುತೇಕ ರೆಡಿಯಾಗಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ.
ದೇಶದ ಮೊದಲ ಸಿ ಟರ್ಮಿನಲ್ ಅನ್ನು ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ನಿಲ್ದಾಣ ಕಾರ್ಯಾರಂಭ ಮಾಡಲು ಶುರು ಮಾಡಿದರೆ, ನಂತರ ಕೆಎಸ್ ಆರ್ (KSR)ಮತ್ತು ಯಶವಂತಪುರ (Yashawanthpura) ರೈಲು ನಿಲ್ದಾಣದಲ್ಲಿ ಜನದಟ್ಟಣೆ ಕಡಿಮೆಯಾಗಲಿದೆ.
ಸರ್. ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿರ್ಮಾಣಕ್ಕಾಗಿ ಸುಮಾರು 314 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. 2021 ಫೆಬ್ರವರಿಯಲ್ಲಿ ಈ ಟರ್ಮಿನಲ್ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಕರೋನಾ (Coronavirus) ಕಾರಣದಿಂದಾಗಿ ಕೆಲಸ ಸ್ಥಗಿತಗೊಂಡಿದ್ದು, ಇದೀಗ ಟರ್ಮಿನಲ್ ಪೂರ್ತಿಯಾಗಿ ರೆಡಿಯಾಗಿ ನಿಂತಿದೆ.
ದೇಶದ ಮೊದಲ ಎಸಿ ಟರ್ಮಿನಲ್ ನಿರ್ಮಾಣದೊಂದಿಗೆ ಇನ್ನು ಬೆಂಗಳೂರಿಗೆ ಹೆಚ್ಚು ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಆರಂಭವಾಗಲಿದೆ. ಈ ಕಾರಣದಿಂದಾಗಿ ಬಹುತೇಕ ಎಲ್ಲಾ ಜಿಲ್ಲೆಗಳಿಂದಲೂ ಬೆಂಗಳೂರಿಗೆ ರೈಲು ಸಂಚಾರ ಸಾಧ್ಯವಾಗಲಿದೆ.
ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಎಸಿ ಟರ್ಮಿನಲ್ ಅನ್ನು ನಿರ್ಮಿಸಲಾಗಿದೆ. ಈ ನಿಲ್ದಾಣ ಯಾವ ವಿಮಾನ ನಿಲ್ದಾಣಕ್ಕೂ ಕಡಿಮೆ ಇಲ್ಲ ಎನ್ನಲಾಗಿದೆ. ರೈಲ್ವೆ ಯಾವ ರೀತಿ ಈ ನಿಲ್ದಾಣವನ್ನು ನಿರ್ಮಿಸಲಾಗಿದೆ ಎಂದರೆ, ನವಭಾರತದ ಝಲಕ್ ಇಲ್ಲಿ ಕಾಣಬಹುದು..