2000ರಲ್ಲಿ ಖಾಲಿ ಕೈಯಲ್ಲಿ ಅಡ್ಡಾಡುತ್ತಿದ್ದ ದರ್ಶನ್ ಇಂದು ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?
ರೇಣುಕಾಸ್ವಾಮಿ ಕೊಲೆ ಆರೋಪದಡಿಯಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಪೊಲೀಸ್ ಕಸ್ಟಡಿಯಲಿದೆ. ವಿಚಾರಣೆ ವೇಳೆ ಬಗೆದಷ್ಟು ಬಯಲಾಗ್ತಿರೋ ರಹಸ್ಯ ಕಂಡು ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತಿದೆ.
ಅಂದಹಾಗೆ ನಾವಿಂದು ಈ ವರದಿಯಲ್ಲಿ ನಟ ದರ್ಶನ್ ಆಸ್ತಿಪಾಸ್ತಿ, ಕೌಟುಂಬಿಕ ಹಿನ್ನೆಲೆ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.
ದರ್ಶನ್ ತೂಗುದೀಪ ಹುಟ್ಟಿದ್ದು 16 ಫೆಬ್ರವರಿ 1977ರಲ್ಲಿ. ಸ್ಯಾಂಡಲ್ವುಡ್’ನ ಡಿ ಬಾಸ್ ಎಂದೇ ಪ್ರಸಿದ್ಧಿ ಪಡೆದಿದ್ದ ನಟ, ನಿರ್ಮಾಪಕ ಮತ್ತು ವಿತರಕ. ದರ್ಶನ್ 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಪ್ರಾರಂಭಿಸಿದ್ದರು. ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವ ದರ್ಶನ್, 2002ರಲ್ಲಿ ತೆರೆಕಂಡ ಚಲನಚಿತ್ರ ಮೆಜೆಸ್ಟಿಕ್ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.
ಯಜಮಾನ (2019), ರಾಬರ್ಟ್ (2021), ಕಾಟೇರ (2023), ಗಜ (2008), ನವಗ್ರಹ (2008), ಸಾರಥಿ (2011), ಬುಲ್ ಬುಲ್ (2013), ಕರಿಯಾ (2003) ಹೀಗೆ ಅನೇಕ ಹಿಟ್ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದಾರೆ.
ಕೊಡಗಿನ ಪೊನ್ನಂಪೇಟೆಯಲ್ಲಿ ಜನಿಸಿದ ದರ್ಶನ್ ತಾಯಿ ಹೆಸರು ಮೀನಾ ಮತ್ತು ತಂದೆ ತೂಗುದೀಪ ಶ್ರೀನಿವಾಸ್. ಇವರು ಖ್ಯಾತ ನಟ ಕೂಡ ಹೌದು. ಇನ್ನು ದರ್ಶನ್ ಅವರಿಗೆ ದಿವ್ಯಾ ಎಂಬ ಸಹೋದರಿ ಮತ್ತು ದಿನಕರ್ ತೂಗುದೀಪ ಎಂಬ ಸಹೋದರ ಇದ್ದಾರೆ. 2000ರಲ್ಲಿ ದರ್ಶನ್ ವಿಜಯಲಕ್ಷ್ಮಿ ಎಂಬವರನ್ನು ವಿವಾಹವಾಗಿದ್ದು, ಈ ದಂಪತಿಗೆ ವಿನೀಶ್ ಎಂಬ ಮಗನಿದ್ದಾನೆ.
ದರ್ಶನ್ ತೂಗುದೀಪ್ ಅವರು ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, $ 12 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.