ಟೀಂ ಇಂಡಿಯಾದ ದಿಗ್ಗಜ ಸುನಿಲ್ ಗವಾಸ್ಕರ್ ಮಗ ಕೂಡ ಕ್ರಿಕೆಟಿಗನೇ: ಪತ್ನಿ ದೇಶದ ಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ! ಯಾರಿವರು ಗೊತ್ತಾಯ್ತಾ?
ಟೀಂ ಇಂಡಿಯಾದ ಲಿಟಲ್ ಮಾಸ್ಟರ್ ಎಂದೇ ಪ್ರಖ್ಯಾತಿ ಗಳಿಸಿದ್ದ ಸುನಿಲ್ ಗವಾಸ್ಕರ್ ಕುಟುಂಬದ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಮಾಜಿ ಭಾರತೀಯ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್ ಬ್ಯಾಟಿಂಗ್ ವಿಚಾರದಲ್ಲಿ ಅನೇಕ ಸರ್ವಶ್ರೇಷ್ಠ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
10 ಜುಲೈ 1949 ರಂದು ಮುಂಬೈನಲ್ಲಿ ಜನಿಸಿದರು, ಇನ್ನು ಇವರ ಪತ್ನಿ ಹೆಸರು ಮಾರ್ಷ್ನಿಲ್ ಗವಾಸ್ಕರ್. ಇನ್ನು ಇವರ ರೋಹನ್ ಗವಾಸ್ಕರ್ ಕೂಡ ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ.
ಗವಾಸ್ಕರ್ ತಮ್ಮ ಅವಧಿಯಲ್ಲಿ, ಒಂದು ವರ್ಷದಲ್ಲಿ 1000 ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹೆಚ್ಚು ಶತಕಗಳು (34), ಹೆಚ್ಚು ರನ್ (ಒಂಬತ್ತು ಸಾವಿರಕ್ಕೂ ಹೆಚ್ಚು), ಹೆಚ್ಚು ಶತಕಗಳ ಪಾಲುದಾರಿಕೆಗಳು ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳು ಇವೆಲ್ಲಾ ಸನ್ನಿ ಬತ್ತಳಿಕೆಯಲ್ಲಿರುವ ವಿಶೇಷ ದಾಖಲೆಗಳ ಪಟ್ಟಿ.
‘ಕ್ರಿಕೆಟ್ ನ ರತ್ನ’ ಎಂದೇ ಕರೆಸಿಕೊಳ್ಳುವ ಗವಾಸ್ಕರ್ ಏಕದಿನ ಪಂದ್ಯಗಳಲ್ಲೂ ತಮ್ಮ ತಂಡಕ್ಕೆ ಭದ್ರ ಬುನಾದಿ ಒದಗಿಸಿದ್ದಾರೆ. ಇಂಗ್ಲೆಂಡ್ʼನಲ್ಲಿ 100 ಕ್ಯಾಚ್ ಪಡೆದ ದಾಖಲೆಯನ್ನೂ ಮಾಡಿದ್ದಾರೆ.
1980 ರಲ್ಲಿ ಭಾರತ ಸರ್ಕಾರದಿಂದ ಕ್ರೀಡಾ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ನಂತರ 1975 ರಲ್ಲಿ 'ಅರ್ಜುನ ಪ್ರಶಸ್ತಿ', ಇದಲ್ಲದೇ ಅನೇಕ ಗೌರವ ಸಂದಿದೆ.
ಅಂದಹಾಗೆ ಸುನಿಲ್ ಅವರ ಪತ್ನಿ ಮಾರ್ಷ್ನಿಲ್ ಗವಾಸ್ಕರ್, ಉತ್ತರ ಪ್ರದೇಶದ ಕಾನ್ಪುರ ನಿವಾಸಿ. ಪ್ರಸ್ತುತ ಮಕ್ಕಳಿಗೆ ಕ್ರೀಡೆಯಲ್ಲಿ ತರಬೇತಿ ನೀಡುವ ಮೂಲಕ ಕ್ರಿಕೆಟ್’ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಸಹಾಯ ಮಾಡುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ.