ಬಿಸ್ಕೆಟ್ ಮೇಲೆ ಕಳ್ಳನ ಫೋಟೋ ; ಕಳ್ಳನನ್ನು ಹಿಡಿಯಲು ಅಂಗಡಿ ಮಾಲೀಕನ ಉಪಾಯ
ಅಮೆರಿಕಾದ Milwaukee, Wisconsin ನಲ್ಲಿ ಕ್ಯಾನ್ ಪೊರಾ ಹೆಸರಿನ ಬೇಕರಿಯಿದೆ. ಕೆಲ ದಿನಗಳ ಹಿಂದೆ ಈ ಬೇಕರಿಗೆ ನುಗ್ಗಿದ ಕಳ್ಳ, ಬೇಕರಿಯಲ್ಲಿದ್ದ ಹಣ ಮತ್ತು ವಸ್ತುಗಳನ್ನು ದೋಚಿ ಪರಾರಿಯಾಗುತ್ತಾನೆ. ಆದರೆ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುತ್ತದೆ.
ಕಳ್ಳನನ್ನು ಹಿಡಿಯುವುದು ಹೇಗೆ ಎಂದು ಬೇಕರಿ ಮಾಲೀಕ ಯೋಚಿಸುತ್ತಾನೆ. ಕೊನೆಗೆ ಆತನಿಗೆ ಹೊಳೆದ ಉಪಾಯದ ಪ್ರಕಾರ ಕಳ್ಳನನ್ನು ಹಿಡಿಯುವ ಯೋಜನೆ ರೂಪಿಸುತ್ತಾನೆ. ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳನ ಫೋಟೋವನ್ನು ತನ್ನ ಬೇಕರಿಯಲ್ಲಿ ಮಾರಾಟ ಮಾಡುವ ಬಿಸ್ಕೆಟ್ ಮೇಲೆ ಪ್ರಿಂಟ್ ಹಾಕಿಸುತ್ತಾನೆ. ಈ ಬಗ್ಗೆ ಬೇಕರಿಯ ಫೇಸ್ ವಬುಕ್ ಪೇಜ್ ನಲ್ಲೂ ಶೇರ್ ಮಾಡುತ್ತಾನೆ. ತನ್ನ ಬೇಕರಿಯಲ್ಲಿ ಆದ ಕಳ್ಳತನದ ಬಗ್ಗೆ ವಿವರವಾಗಿ ಪೋಸ್ಟ್ ಬರೆಯುತ್ತಾನೆ.
ಬೇಕರಿ ಮಾಲೀಕ ಈ ಪೋಸ್ಟ್ ಹಾಕುತ್ತಿದ್ದಂತೆ, ಸುಮಾರು ಜನ ಆ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಅನೇಕರು ಬೇಕರಿ ಮಾಲೀಕನ ಉಪಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂತೂ ಇಂತೂ ಬೇಕರಿ ಮಾಲೀಕನ ಉಪಾಯ ಫಲ ಕೊಟ್ಟಿದೆ. ಕಳ್ಳನನ್ನು ಹಿಡಿಯಲಾಗಿದೆ.