ನಟಿ ಉರ್ಫಿ ಜಾವೇದ್ ಕ್ಷಮೆ ಕೇಳಿದ ʼಇನ್‌ಸ್ಟಾಗ್ರಾಮ್ʼ..! ಅಸಲಿಗೆ ಆಗಿದ್ದಾದ್ರು ಏನು..?

Sun, 03 Dec 2023-4:50 pm,

ಬಿಗ್ ಬಾಸ್ ಖ್ಯಾತಿ ಮತ್ತು ಮನರಂಜನಾ ಪ್ರಪಂಚದ ಖ್ಯಾತ ನಟಿ ಉರ್ಫಿ ಜಾವೇದ್, ತಮ್ಮ ಫ್ಯಾಷನ್ ಸೆನ್ಸ್‌ಗಾಗಿ ಯಾವಾಗಲೂ ಸುದ್ದಿಯಲ್ಲಿದ್ದಾರೆ.   

ಉರ್ಫಿ ತನ್ನ Instagram ನಲ್ಲಿ ಅನೇಕ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಿರಂತರವಾಗಿ ಸುದ್ದಿಯಲ್ಲಿರುತ್ತಾರೆ.  

ಇದೀಗ ಉರ್ಫಿ ಜಾವೇದ್ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.   

ಸ್ವತಃ ಉರ್ಫಿ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.    

ಉರ್ಫಿ ಅವರ ಖಾತೆಯನ್ನು ಆಕಸ್ಮಿಕವಾಗಿ ಅಮಾನತುಗೊಳಿಸಲಾಗಿತ್ತು. ಇದೀಗ ಖಾತೆಯನ್ನು ಪುನಃ ಸಕ್ರಿಯಗೊಳಿಸಲಾಗಿದೆ.   

ಅಲ್ಲದೆ, ತೊಂದರೆಗೆ ನಾವು ಕ್ಷಮೆಯಾಚಿಸುತ್ತೇವೆ ಎಂದು Instagram Urfi ಗೆ ಸಂದೇಶದ ಮೂಲಕ ಕ್ಷಮೆ ಕೇಳಿದೆ.   

ಉರ್ಫಿ ತಮ್ಮ ಪ್ಯಾಶನ್‌ ಸೆನ್ಸ್‌ನಿಂದ ಹೆಸರುವಾಸಿಯಾಗಿದ್ದಾರೆ. ಆಗಾಗ ವಿಚಿತ್ರವಾಗಿ ಫೋಟೋಶೂಟ್‌ ಮಾಡಿಸುವ ಚೆಲುವೆ ವೈರಲ್‌ ಆಗುತ್ತಿರುತ್ತಾರೆ.  

ನಟಿ ಉರ್ಫಿ ಉಡುಗೆ ತೊಡುಗೆಗೆ ಸಾಕಷ್ಟು ವಿರೋಧಗಳು ಸಹ ವ್ಯಕ್ತವಾಗುತ್ತವೆ. ಆದ್ರೆ ಅದ್ಯಾವುದನ್ನೂ ಅವರು ತಲೆಗೆ ಹಾಕಿಕೊಳ್ಳಲ್ಲ.  

ಉರ್ಫಿ ತನ್ನ ಬಟ್ಟೆಗಾಗಿ ಅನೇಕ ಬಾರಿ ಟ್ರೋಲ್ ಆಗಿದ್ದಾಳೆ. ಆದರೆ ಯಾವುದೇ ಟ್ರೋಲಿಂಗ್ ಅನ್ನು ಲೆಕ್ಕಿಸದೆ, ಬಹಿರಂಗವಾದ ತನ್ನ ಸ್ಟೈಲ್‌ ಮುಂದುವರೆಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link