ಮಾನ್ಸೂನ್‌ನಲ್ಲಿ ಕಾಡುವ ರಿಂಗ್‌ವರ್ಮ್ ಸಮಸ್ಯೆಯಿಂದ ತಕ್ಷಣ ಪರಿಹಾರಕ್ಕಾಗಿ ಸರಳ ಮನೆಮದ್ದುಗಳು
ಮಾನ್ಸೂನ್‌ನಲ್ಲಿ ಹೆಚ್ಚು ಬಾಧಿಸುವ ಚರ್ಮ ಸಂಬಂಧಿತ ಸಮಸ್ಯೆ ಎಂದರೆ ರಿಂಗ್‌ವರ್ಮ್ ಅಥವಾ ಹುಳುಕಡ್ಡಿ. ರಿಂಗ್‌ವರ್ಮ್ ಎಂಬುದು ಶಿಲೀಂಧ್ರಗಳ ಸೋಂಕಾಗಿದ್ದು ಕೆಲವು ನೈಸರ್ಗಿಕ ಮದ್ದುಗಳನ್ನು ಬಳಸಿ ಇದನ್ನು ಸುಲಭವಾಗಿ ಗುಣಪಡಿಸಬಹುದು. ಅವುಗಳೆಂದರೆ...
ರಿಂಗ್‌ವರ್ಮ್ ಸಮಸ್ಯೆಗೆ ಕೊಬ್ಬರಿ ಎಣ್ಣೆ ಅತ್ಯುತ್ತಮ ಮನೆಮದ್ದು. ಇದನ್ನು ಬಾಧಿತ ಜಾಗಕ್ಕೆ ಸವರುವುದರಿಂದ ಶೀಘ್ರದಲ್ಲೇ ಹುಳುಕಡ್ಡಿ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಮುಲ್ತಾನಿ ಮಿಟ್ಟಿಯನ್ನು ರೋಸ್ ವಾಟರ್ ಜೊತೆ ಬೆರೆಸಿ ತುರಿಕೆ ಇರುವ ಜಾಗಕ್ಕೆ ಲೇಪಿಸಿ, ಇದು ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.
ಚರ್ಮದಲ್ಲಿರುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಟೊಮಾಟೊ ತುಂಬಾ ಪ್ರಯೋಜನಕಾರಿ ಆಗಿದೆ. ರಿಂಗ್‌ವರ್ಮ್ ಪೀಡಿತ ಜಾಗಕ್ಕೆ ಟೊಮಾಟೊ ಅನ್ವಯಿಸುವುದರಿಂದ ತುರಿಕೆ ಶೀಘ್ರದಲ್ಲೇ ಉಪಶಮನಗೊಳ್ಳುತ್ತದೆ.
ನೈಸರ್ಗಿಕ ಆಂಟಿ ಫಂಗಲ್ ಏಜೆಂಟ್ ಆಗಿರುವ ಬೆಳ್ಳುಳ್ಳಿ ಹುಳುಕಡ್ಡಿ/ಗಜಕರ್ಣ ಸಮಸ್ಯೆಯನ್ನು ಗುಣಪಡಿಸಲು ಸಹಾಯಕವಾಗಿದೆ.
ನೈಸರ್ಗಿಕ ಪ್ರತಿಜೀವಕದಂತೆ ಕಾರ್ಯನಿರ್ವಹಿಸುವ ಅರಿಶಿನವನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಪೀಡಿತ ಪ್ರದೇಶಕ್ಕೆ ಹಚ್ಚುವುದರಿಂದ ಸೋಂಕನ್ನು ಶೀಘ್ರದಲ್ಲೇ ಗುಣಪಡಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.