International Yoga Day 2021: ಲಡಾಖ್‌ನಲ್ಲಿ 18000 ಅಡಿ ಎತ್ತರದಲ್ಲಿ ಐಟಿಬಿಪಿ ಸಿಬ್ಬಂದಿಯ ಯೋಗ ಪ್ರದರ್ಶನ

Mon, 21 Jun 2021-8:55 am,

ಅಂತರರಾಷ್ಟ್ರೀಯ ಯೋಗ ದಿನದಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಲಡಾಖ್‌ನಲ್ಲಿ 18000 ಅಡಿ ಎತ್ತರದಲ್ಲಿ ಯೋಗ ಪ್ರದರ್ಶಿಸಿದರು. (ಫೋಟೋ ಮೂಲ- ಎಎನ್‌ಐ)

ಆರು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿಯವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಕರೆ ನೀಡಿತು ಮತ್ತು ವಿಶ್ವದ ಎಲ್ಲಾ ದೇಶಗಳು ಈ ಅಭಿಯಾನಕ್ಕೆ ಸೇರಿಕೊಂಡವು. (ಫೋಟೋ ಮೂಲ- ಎಎನ್‌ಐ)  

ಜೂನ್ 21 ರ ದಿನದ ಒಂದು ವಿಶೇಷತೆಯೆಂದರೆ, ಇದು ವರ್ಷದ 365 ದಿನಗಳಲ್ಲಿ ಅತಿ ಉದ್ದದ ದಿನವಾಗಿದೆ ಮತ್ತು ಯೋಗದ ನಿರಂತರ ಅಭ್ಯಾಸವು ಒಬ್ಬ ವ್ಯಕ್ತಿಗೆ ದೀರ್ಘಾಯುಷ್ಯವನ್ನು ನೀಡುತ್ತದೆ, ಆದ್ದರಿಂದ ಈ ದಿನವನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು (Internation Yoga Day) ಆಚರಿಸುವ ನಿರ್ಧಾರವನ್ನು ಮಾಡಲಾಯಿತು. (ಫೋಟೋ ಮೂಲ- ಎಎನ್‌ಐ)

ಇದನ್ನೂ ಓದಿ-  Yoga For Weight Loss: ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಉತ್ತಮ ಯೋಗಾಸನಗಳಿವು

ಅಂತರರಾಷ್ಟ್ರೀಯ ಯೋಗ ದಿನ 2021 ರ ವಿಷಯವೆಂದರೆ 'ಯೋಗ ಫಾರ್ ವೆಲ್ನೆಸ್'. ದೇಹವನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡುವುದು ಈ ವಿಷಯದ ಉದ್ದೇಶವಾಗಿದೆ. ಕರೋನಾ ಅವಧಿಯಲ್ಲಿ ಯೋಗವು ಜನರಿಗೆ ಭರವಸೆಯ ಕಿರಣವಾಯಿತು ಎಂದು ಪ್ರಧಾನಿ ಮೋದಿ ಹೇಳಿದರು. (ಫೋಟೋ ಮೂಲ- ಎಎನ್‌ಐ)

ಇದನ್ನೂ ಓದಿ- ಒತ್ತಡದಿಂದ ದೂರವಿರಲು ನಿತ್ಯ ಕೇವಲ 10 ನಿಮಿಷ ಮಾಡಿ ಈ ಆಸನ

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (Internation Yoga Day) ಸಂದರ್ಭದಲ್ಲಿ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ಲಡಾಖ್‌ನ ಪಂಗೊಂಗ್ ತ್ಸೋ ಸರೋವರದ ದಡದಲ್ಲಿ ಯೋಗವನ್ನು ಪ್ರದರ್ಶಿಸಿದರು. (ಫೋಟೋ ಮೂಲ- ಎಎನ್‌ಐ)

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ, ಸೈನಿಕರು ತಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿಡಲು ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯೋಗವನ್ನು ಪ್ರದರ್ಶಿಸಿದರು. (ಫೋಟೋ ಮೂಲ- ಎಎನ್‌ಐ)

ಅಂತರರಾಷ್ಟ್ರೀಯ ಯೋಗ ದಿನ: ಅರುಣಾಚಲ ಪ್ರದೇಶದ ಲೋಹಿತ್‌ಪುರದ ಪ್ರಾಣಿ ತರಬೇತಿ ಶಾಲೆಯಲ್ಲಿ (ಎಟಿಎಸ್) ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಕುದುರೆಗಳೊಂದಿಗೆ ಯೋಗ ಮಾಡಿದರು. (ಫೋಟೋ ಮೂಲ- ಎಎನ್‌ಐ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link