iPhone 14 Deals: ಕೇವಲ 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 14 ಖರೀದಿಸಿರಿ

Sat, 28 Oct 2023-9:14 pm,

Flipkart ಈ ಹಬ್ಬದ ಋತುವಿನಲ್ಲಿ iPhone 14 ಖರೀದಿ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿದೆ. ಈ ಆಫರ್ ಒಂದಲ್ಲ ಎರಡಲ್ಲ ಹಲವು ರಿಯಾಯಿತಿ ಕೊಡುಗೆಗಳನ್ನು ಒಳಗೊಂಡಿದೆ. ನೀವು ಅತ್ಯಂತ ಕಡಿಮೆ ಬೆಲೆಗೆ iPhone 14 ಖರೀದಿಸಲು ಮನಸ್ಸು ಮಾಡಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಬೇಕು.   

ಈ ರಿಯಾಯಿತಿ ಕೊಡುಗೆಯ ಬಗ್ಗೆ ಮಾತನಾಡುವುದಾದರೆ, ಐಫೋನ್ 14 ಖರೀದಿಯ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ಅದ್ಭುತ ಕೊಡುಗೆ ನೀಡಲಾಗುತ್ತಿದೆ. ಈ ಕೊಡುಗೆಯಲ್ಲಿ ನೀವು ದೊಡ್ಡ ಉಳಿತಾಯ ಮಾಡಬಹುದು. ಐಫೋನ್ 14 128 GB ಮಾದರಿಯ ನಿಜವಾದ ಬೆಲೆಯನ್ನು ಫ್ಲಿಪ್‌ಕಾರ್ಟ್‌ನಲ್ಲಿ 69,900 ರೂ.ಗಳಿಗೆ ನೀಡಲಾಗುತ್ತಿದೆ.

ನಿಸ್ಸಂಶಯವಾಗಿ ಈ ಬೆಲೆ ಪ್ರತಿಯೊಬ್ಬರ ಬಜೆಟ್‌ಗೆ ಹೊಂದಿಕೆಯಾಗುವುದಿಲ್ಲ. ಆದರೆ ಮೂಲ ಬೆಲೆಯಲ್ಲಿ ಶೇ.18ರಷ್ಟು ರಿಯಾಯಿತಿ ನಂತರ ಈ ಬೆಲೆ 56,999 ರೂ. ಆಗುತ್ತದೆ. ಇದರ ಮೇಲೆ ಮತ್ತೊಂದು ಕೊಡುಗೆಯನ್ನು ನೀಡಲಾಗುತ್ತಿದ್ದು, ಇದರಿಂದ ನಿಮಗೆ ಸಾಕಷ್ಟು ಹಣ ಉಳಿತಾಯವಾಗಲಿದೆ.

iPhone 14 128 GB ಮಾಡೆಲ್‌ಗಾಗಿ ಗ್ರಾಹಕರು 56,999 ರೂ. ಬೆಲೆಯನ್ನು ಪಾವತಿಸಬೇಕಾಗುತ್ತದೆ. ಆದರೆ ನೀವು ವಿನಿಮಯ ಕೊಡುಗೆಯ ಲಾಭ ಪಡೆದರೆ ಅತ್ಯಂತ ಕಡಿಮೆ ಬೆಲೆಗೆ ಐಫೋನ್ ಖರೀದಿಸಬಹುದು.

iPhone 14 128 GB ರೂಪಾಂತರದ ಖರೀದಿಯ ಮೇಲೆ ಫ್ಲಿಪ್‌ಕಾರ್ಟ್‌ನಿಂದ 39,150 ರೂ.ಗಳ ಎಕ್ಸ್‌ಚೇಂಜ್ ರಿಯಾಯಿತಿ ನೀಡಲಾಗುತ್ತಿದೆ. ಇದರ ಸಂಪೂರ್ಣ ಲಾಭ ಪಡೆದರೆ ನೀವು ಕೇವಲ 20 ಸಾವಿರ ರೂ.ಗೆ ಐಫೋನ್ ಖರೀದಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link