IPL 2021: ಐಪಿಎಲ್ ಟೂರ್ನಿ ಮಿಸ್ ಮಾಡಿಕೊಳ್ಳುತ್ತಿರುವ ಟಾಪ್ ಆಟಗಾರರು
ಐಪಿಎಲ್ ಟೂರ್ನಿಯ ಮೊದಲ ಹಂತದ ಪಂದ್ಯಗಳಲ್ಲಿ ಬೆರಳಿನ ಗಾಯದಿಂದಾಗಿ ರಾಜಸ್ಥಾನ ರಾಯಲ್ ನ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೊರಗುಳಿದಿದ್ದಾರೆ. ಇಂಗ್ಲೆಂಡ್ ಆಟಗಾರ ಸ್ಟೋಕ್ಸ್ ಕಳೆದ ತಿಂಗಳು ಕ್ರಿಕೆಟ್ ನಿಂದ ಅನಿರ್ದಿಷ್ಟ ವಿರಾಮವನ್ನು ಘೋಷಿಸಿದ್ದು, 2ನೇ ಹಂತದ ಪಂದ್ಯಗಳಲ್ಲಿ ಅವರ ಅನುಪಸ್ಥಿತಿ ರಾಜಸ್ಥಾನ್ ತಂಡಕ್ಕೆ ಕಾಡಲಿದೆ. ಸಂಜು ಸ್ಯಾಮ್ಸನ್ ನೇತೃತ್ವದ ಐಪಿಎಲ್ ಫ್ರಾಂಚೈಸ್ ಮೇಲೆ ಇದರು ನೇರ ಪರಿಣಾಮ ಬೀರಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ 15.5 ಕೋಟಿ ರೂ. ಪಡೆದಿರುವ ಸ್ಟಾರ್ ಆಸೀಸ್ ಆಲ್ ರೌಂಡರ್ ಪ್ಯಾಟ್ ಕಮಿನ್ಸ್ 2ನೇ ಹಂತದ ಐಪಿಎಲ್ ಪಂದ್ಯಗಳಲ್ಲಿ ಆಡುತ್ತಿಲ್ಲ. ಇದಕ್ಕೆ ಕಾರಣ ಅವರು ತಂದೆಯಾಗುತ್ತಿರುವುದು. ಕಮಿನ್ಸ್ ಪತ್ನಿ ಗರ್ಭಿಣಿಯಾಗಿದ್ದು, ಕುಟುಂಬದ ಜೊತೆಗೆ ಅವರು ಇರಲಿದ್ದಾರೆ.
ಈ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಲಿದೆ. ಸ್ಟೋಕ್ಸ್ ಮತ್ತು ಆರ್ಚರ್ ಜೊತೆ ಜೋಸ್ ಬಟ್ಲರ್ ಕೂಡ ಬಾಕಿ ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ. ಬಟ್ಲರ್ ಅನುಪಸ್ಥಿತಿಯು ರಾಜಸ್ಥಾನ್ ರಾಯಲ್ಸ್ ತಂಡದ ಮೇಲೆ ಪರಿಣಾಮ ಬೀರಲಿದೆ.
ಐಪಿಎಲ್ 2ನೇ ಹಂತದ ಪಂದ್ಯಗಳಿಂದ ಹೊರಗುಳಿದಿರುವ ಇನ್ನೊಬ್ಬ ಇಂಗ್ಲೆಂಡ್ ಕ್ರಿಕೆಟಿಗ ಜಾನಿ ಬೈರ್‌ಸ್ಟೊ. ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಓಪನರ್ ಬೈರ್‌ಸ್ಟೊ ವೈಯಕ್ತಿಕ ಕಾರಣಗಳಿಂದ ಬಾಕಿ ಪಂದ್ಯಗಳಲ್ಲಿ ಆಡುತ್ತಿಲ್ಲ. ಇದು ಈಗಾಗಲೇ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ತಂಡಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ಮೊದಲ ಹಂತದ 7 ಪಂದ್ಯಗಳಿಂದ ಬೇರ್‌ಸ್ಟೊ 41+ ರ ಸರಾಸರಿಯಲ್ಲಿ 248 ರನ್ ಗಳಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ತಮ್ಮ ಮೊಣಕೈ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಗಾಯಗಳಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಇನ್ನುಳಿದ ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ. ಅರ್ಚರ್ ಸದ್ಯ ವಿಶ್ರಾಂತಿ ಪಡೆಯುತ್ತಿದ್ದು, ಮುಂಬರುವ ಟಿ-20 ಮತ್ತು ಆಷಸ್ ಟೆಸ್ಟ್ ಸರಣಿಗಾಗಿ ಸಜ್ಜುಗೊಳ್ಳುತ್ತಿದ್ದಾರೆ.