IRCTC Vaishno Devi Package: ವೈಷ್ಣೋದೇವಿ ದರ್ಶನಕ್ಕೆ ಟೂರ್ ಪ್ಯಾಕೇಜ್ ಮಾಹಿತಿ ಇಲ್ಲಿದೆ ನೋಡಿ
ಐಆರ್‌ಸಿಟಿಸಿ 3 ರಾತ್ರಿ ಮತ್ತು 4 ದಿನಗಳ ವೈಷ್ಣೋ ದೇವಿ ಪ್ಯಾಕೇಜ್ ಅನ್ನು ನೀಡುತ್ತಿದ್ದು, ಯಾತ್ರಾರ್ಥಿಗಳು ವೈಷ್ಣೋ ದೇವಿಯ ಜನಪ್ರಿಯ ದೇಗುಲಕ್ಕೆ ಭೇಟಿ ನೀಡಬಹುದು. 5200 ಅಡಿ ಎತ್ತರದಲ್ಲಿದೆರುವ ಈ ಧಾರ್ಮಿಕ ಸ್ಥಳವು ಕತ್ರಾದಿಂದ ಸುಮಾರು 12 ಕಿಮೀ ದೂರದಲ್ಲಿದೆ.
ಐಆರ್‌ಸಿಟಿಸಿ ವೈಷ್ಣೋದೇವಿ ಪ್ಯಾಕೇಜ್ ಪ್ರತಿ ವ್ಯಕ್ತಿಗೆ 5,795 ರೂ.ಗೆ ನಿಗದಿಪಡಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಕಂಪನಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಈ ಪ್ರವಾಸವು ನವದೆಹಲಿಯಿಂದ ಆರಂಭವಾಗುತ್ತದೆ. ಪ್ರಯಾಣದ ಮೊದಲ ದಿನದಂದು ಪ್ರಯಾಣಿಕರು AC 3 ಹಂತದ ರೈಲಿನಲ್ಲಿ ಜಮ್ಮುವಿನ ಕತ್ರಾಗೆ ಪ್ರಯಾಣಿಸುತ್ತಾರೆ. 2ನೇ ದಿನ ಎಲ್ಲಾ ಪ್ರವಾಸಿಗರು ಜಮ್ಮು ನಿಲ್ದಾಣಕ್ಕೆ ಆಗಮಿಸುತ್ತಾರೆ.
ಜಮ್ಮು ರೈಲು ನಿಲ್ದಾಣವನ್ನು ತಲುಪಿದ ನಂತರ ಪ್ರಯಾಣಿಕರನ್ನು ಗುಂಪು ಗುಂಪಾಗಿ ವಿಂಗಡಿಸಿದ ನಂತರ Non AC ವಾಹನದ ಮೂಲಕ ಕತ್ರಾಗೆ ಕರೆದೊಯ್ಯಲಾಗುತ್ತದೆ. ಪ್ರಯಾಣಿಕರ ಗುಂಪಿನ ಗಾತ್ರವನ್ನು ಅವಲಂಬಿಸಿ ಪ್ರವಾಸಿಗರನ್ನು ದೇವಿ ದರ್ಶನಕ್ಕೆ ಕರೆದುಕೊಂಡು ಹೋಗಲಾಗುತ್ತದೆ.
ಮಾತಾ ವೈಷ್ಣೋದೇವಿ ಯಾತ್ರೆಯ ನೋಂದಣಿ ಚೀಟಿಯನ್ನು ಸಂಗ್ರಹಿಸಲು ರೈಲು ಸರಸ್ವತಿ ಧಾಮದಲ್ಲಿ ನಿಲ್ಲುತ್ತದೆ. ನಂತರ ಪ್ರಯಾಣಿಕರು ಹೋಟೆಲ್‌ಗೆ ಚೆಕ್ ಇನ್ ಮಾಡುತ್ತಾರೆ, ಅಲ್ಲಿ ಅವರಿಗೆ ಉಪಹಾರವನ್ನು ನೀಡಲಾಗುತ್ತದೆ.
ಬಂಗಾಂಗ(Banganga)ದಲ್ಲಿ ಇಳಿದ ನಂತರ ಪ್ರಯಾಣಿಕರು ಮಾತಾ ವೈಷ್ಣೋದೇವಿ ದೇಗುಲದಲ್ಲಿ ದರ್ಶನ ಪಡೆಯುತ್ತಾರೆ. ಬಳಿಕ ಹೋಟೆಲ್‌ಗೆ ಹಿಂತಿರುಗಿ ಅಲ್ಲಿ ರಾತ್ರಿ ತಂಗುತ್ತಾರೆ. ಮರುದಿನ ಜಮ್ಮು ರೈಲ್ವೆ ನಿಲ್ದಾಣಕ್ಕೆ ಹಿಂತಿರುಗುತ್ತಾರೆ. ಅಲ್ಲಿ ಮಾತೃ ವೈಷ್ಣೋದೇವಿಯ ಧಾರ್ಮಿಕ ಯಾತ್ರೆಯನ್ನು ಅಂತಿಮಗೊಳಿಸಿ ನವದಹಲಿಗೆ ವಾಪಸ್ ರೈಲು ಪ್ರಯಾಣ ನಡೆಸುತ್ತಾರೆ.