PPF Account: ನಿಮ್ಮ ಪಿಪಿಎಫ್ ಖಾತೆ ಬಂದ್ ಆಗಿದೆಯೇ? ಇಂದೇ ಈ ಕೆಲಸ ಮಾಡಿ, ಇಲ್ಲವೇ ಭಾರೀ ನಷ್ಟ
ಪಿಪಿಎಫ್ ಖಾತೆಯಲ್ಲಿ ಪ್ರಸ್ತುತ ವಾರ್ಷಿಕ 7.1 % ಬಡ್ಡಿಯನ್ನು ನೀಡಲಾಗುತ್ತಿದೆ. ಈ ಖಾತೆಯಲ್ಲಿ ಹೂಡಿಕೆ ಮಾಡುವ ಮೂಲಕ ಫಾರ್ಮ್ 80ಸಿ ಅಡಿಯಲ್ಲಿ ವಾರ್ಷಿಕ ಆದಾಯದ 1.5 ಲಕ್ಷದವರೆಗೆ ತೆರಿಗೆ ಉಳಿಸಬಹುದು.
ಪ್ರತಿ ಆರ್ಥಿಕ ವರ್ಷದಲ್ಲಿ ಪಿಪಿಎಫ್ ಖಾತೆಯಲ್ಲಿ ಕನಿಷ್ಠ 500 ರೂ. ಗಳನ್ನಾದರೂ ಹೂಡಿಕೆ ಮಾಡಬೇಕು. ಇಲ್ಲದಿದ್ದರೆ ಖಾತೆಯನ್ನು ಮುಚ್ಚಲಾಗುತ್ತದೆ.
ನೀವು ಪ್ರತಿ ಆರ್ಥಿಕ ವರ್ಷದಲ್ಲಿ ಪಿಪಿಎಫ್ ಖಾತೆಯಲ್ಲಿ ಕನಿಷ್ಠ ಮೊತ್ತದ ಹಣವನ್ನು ಠೇವಣಿ ಮಾಡದಿದ್ದರೆ, ಪಿಪಿಎಫ್ ಖಾತೆಯು ನಿಷ್ಕ್ರಿಯೆಗೊಳ್ಳುತ್ತದೆ. ಆದಾಗ್ಯೂ, ಇದರಲ್ಲಿ ನೀವು ಬಡ್ಡಿಯನ್ನು ಪಡಿಯುತ್ತಿರುತ್ತೀರಿ. ಆದರೆ, ಕೆಲವು ಅನಾನುಕೂಲಗಳನ್ನು ಸಹ ಎದುರಿಸಬೇಕಾಗುತ್ತದೆ.
ಪಿಪಿಎಫ್ ಖಾತೆಯಲ್ಲಿ ನೀವು ವಾರ್ಷಿಕವಾಗಿ ಕನಿಷ್ಠ 500ರೂ.ಗಳನ್ನು ಪಾವತಿಸಲು ವಿಫಲರಾದಲ್ಲಿ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದಾಗಿ ಮೊದಲನೆಯದಾಗಿ ನೀವು ನಿಮ್ಮ ಹೂಡಿಕೆ ಮೇಲೆ ಸಾಲ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಖಾತೆಯನ್ನು ಪುನಃ ಚಾಲ್ತಿಗೊಳಿಸಲು ದಂಡ ಪಾವತಿಸಬೇಕಾಗುತ್ತದೆ.
ಯಾವುದೇ ಕಾರಣದಿಂದ ನಿಮ್ಮ ಪಿಪಿಎಫ್ ಖಾತೆ ನಿಷ್ಕ್ರಿಯೆಗೊಂಡಿದ್ದರೆ ಅದನ್ನು ಪುನಃ ತೆರೆಯಲು ಲಿಖಿತ ಅರ್ಜಿ ನೀಡಬೇಕಾಗುತ್ತದೆ. ಜೊತೆಗೆ ವರ್ಷಕ್ಕೆ ಇಷ್ಟು ಎಂಬಂತೆ ನಿಗದಿತ ಮೊತ್ತದ ಹಣವನ್ನು ದಂಡವಾಗಿ ಪಾವತಿಸಿ, ನಿಮ್ಮ ಖಾತೆಯನ್ನು ಮರು ಪ್ರಾರಂಭಿಸಬಹುದು.