Ishitha Varsha: ವೈಟ್ ಸ್ಯಾರಿಯಲ್ಲಿ ದೇವತೆಯಂತೆ ಕಂಗೊಳಿಸಿದ ಅಗ್ನಿಸಾಕ್ಷಿ ಸುಂದರಿ!
ಕಿರುತೆರೆ ನಟಿ ಇಶಿತಾ ವರ್ಷ ಇದೀಗ ಹೊಸ ಫೋಟೋಶೂಟ್ ಮಾಡಿಸಿಕೊಂಡು, ಅಭಿಮಾನಿಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇಶಿತಾ ವರ್ಷ ಟ್ರಾನ್ಸಪರೆಂಟ್ ಬಿಳಿ ಬಣ್ಣದ ಸೀರೆಗೆ ಬಿಳಿಯ ಸ್ಲೀವ್ ಲೆಸ್ ಬ್ಲೌಸನ್ನು ಧರಿಸಿ ಪಕ್ಕಾ ದೇವತೆಯಂತೆ ಆಕೆ ಕಂಗೊಳಿಸಿದ್ದರು.
ನಟಿ ಇಶಿತಾ ವರ್ಷ ಕೈಯಲ್ಲಿ ಕೆಂಗುಲಾಬಿ ಹಿಡಿದಿರುವ ಆಕೆ ಗುಲಾಬಿ ಹೂಗಳಿಂದ ತಯಾರಿಸಿದ ಮಾಲೆಯನ್ನು ಮುಂದಾಲೆಯಾಗಿ ಬಳಸಿರುವುದು ವಿಶೇಷ. ಇದರ ಜೊತೆಗೆ ಕಿವಿಗೂ ದೊಡ್ಡದ ಜುಮುಕಿ ಧರಿಸಿದ್ದರು.
ಕಿರುತೆರೆ ಬೆಡಗಿ ಇಶಿತಾ ಫೋಟೋ ತಕ್ಷಣ ನೋಡಿದಾಗ ಏಂಜಲ್ನಂತೆ ಕಂಡು ಪಡ್ಡೆಗಳ ದಿಲ್ ಕದ್ದಿದ್ದಾರೆ. ನೆಟ್ಟಿಗರು ಕಂಡು ವಾವ್ ಎಂದು ಉದ್ಗರಿಸಿದ್ದಾರೆ.
ಇಶಿತಾ ವರ್ಷ ಈ ಫೋಟೋಶೂಟ್ ಅನ್ನು ಕ್ರಿಸ್ಮಸ್ ಸಮಯದಲ್ಲಿ ಮಾಡಿಸಿಕೊಂಡಿದ್ದು, ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಇಶಿತಾ ವರ್ಷ 'ಹೊಸ ಬಾಳಿಗೆ ನೀ ಜೊತೆಯಾದೆ', 'ತಂಗಾಳಿ', 'ಅಸಂಭವ' ಧಾರಾವಾಹಿಗಳಲ್ಲಿ ನಟಿಸಿರುವ ಈಕೆಗೆ ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ 'ಅಗ್ನಿಸಾಕ್ಷಿ' ಧಾರಾವಾಹಿ.
ಇಶಿತಾ ವರ್ಷ ಕೊನೆಯದಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಸು' ಧಾರಾವಾಹಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡ ಈಕೆ ಅತಿಥಿ ಪಾತ್ರದ ಮೂಲಕ ಗಮನ ಸೆಳೆದಿದ್ದರು.
ಕಿರುತೆರೆ ಸುಂದರಿ ಇಶಿತಾ ವರ್ಷ ಸೀರಿಯಲ್ಗಳಲ್ಲಿ ಮಾತ್ರವಲ್ಲದೆ, ರಾಜಾ-ರಾಣಿ ಮತ್ತು ಹಲಾವರು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು.
ಇಶಿತಾ ವರ್ಷ ಕಿರುತೆರೆ ಮಾತ್ರವಲ್ಲದೆ ಗಂಗಾ, ಸ್ವಾರ್ಥರತ್ನ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ.
ಇಶಿತಾ ವರ್ಷ ಸದ್ಯ ವೈಲ್ಡ್ ಲೈಫ್ ಫೋಟೋಗ್ರಫಿಯತ್ತ ತಮ್ಮ ಚಿತ್ತ ಹರಿಸಿ ತಾವು ಸೆರೆ ಹಿಡಿದಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.