IAS Tina Dabi : ಐಎಎಸ್ ಅಧಿಕಾರಿ ಟೀನಾ ದಾಬಿ ಹಂಚಿಕೊಂಡ ಫೋಟೋ ವೈರಲ್..!
ಸುಂದರವಾದ ಫೋಟೋಗಳನ್ನ ಶೇರ್ ಮಾಡಿಕೊಂಡ ಟೀನಾ ದಾಬಿ : ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ಐಎಎಸ್ ಅಧಿಕಾರಿ ಟೀನಾ ದಾಬಿ ಇತ್ತೀಚೆಗೆ ಜೈಸಲ್ಮೇರ್‌ನ ಸೌಂದರ್ಯದ ಬಗೆಗಿನ ಸುಂದರ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನ ನೋಡಿದ ಅಭಿಮಾನಿಗಳು ಅವುಗಳನ್ನ ತುಂಬಾ ಇಷ್ಟಪಟ್ಟಿದ್ದಾರೆ.
ಸುಂದರವಾಗಿ ಕಾಣುತ್ತಿರುವ ಜೈಸಲ್ಮೇರ್ : ಜೈಸಲ್ಮೇರ್‌ನ ಸುಂದರವಾದ ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಟೀನಾ ದಾಬಿ, ಇದು ಮರುಭೂಮಿ ಎಂದರೆ ಯಾರು ನಂಬುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಜೈಸಲ್ಮೇರ್ ನ ಸೌಂದರ್ಯವನ್ನು ನೋಡಿದೆ : ಟೀನಾ ದಾಬಿ ಶೇರ್ ಮಾಡಿರುವ ಫೋಟೋಗಳಲ್ಲಿ ಚಿನ್ನದ ನಗರಿ ಜೈಸಲ್ಮೇರ್ ನಲ್ಲಿ ಸೃಷ್ಟಿಯಾಗಿರುವ ಸೌಂದರ್ಯ ಬಗ್ಗೆ..
ಹಸಿರಿನಿಂದ ಆವೃತವಾದ ಗುಡ್ಡಗಾಡು ಪ್ರದೇಶ : ಮಳೆಯ ನಂತರ ಜೈಸಲ್ಮೇರ್ ಹಸಿರಿನಿಂದ ಆವೃತ್ತವಾಗಿದೆ.
ಪಕ್ಷಿಗಳು ಕಲರವ : ಜೈಸಲ್ಮೇರ್ ನಲ್ಲಿ ದಾಖಲೆ ಮಟ್ಟದಲ್ಲಿ ಮಳೆ ಸುರಿದ ಬಳಿಕ ಅಲ್ಲಿಗೆ ದೇಶ, ವಿದೇಶಿಗಳಿಂದ ಪಕ್ಷಿಗಳ ಆಗಮನ ಆರಂಭವಾಗಿದೆ.
ಮನಸೆಳೆಯುವ ಹಸಿರು : ಜೈಸಲ್ಮೇರ್ ಭಾರೀ ಮಳೆಯ ಕಾರಣ ಹಲ್ಲಿನ ಗುಡ್ಡಗಾಡು ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ.
ಐಎಎಸ್ ಪ್ರದಿವ್ ಗವಾಂಡೆ ಜೊತೆ ಟೀನಾ ದಾಬಿ ಮದುವೆ : ಐಎಎಸ್ ಅಧಿಕಾರಿ ಟೀನಾ ದಾಬಿ ಅವರು UPSC ಯ ಎರಡನೇ ಟಾಪರ್ ಐಎಎಸ್ ಅಥರ್ ಅಮೀರ್ ಖಾನ್ ಅವರನ್ನು 2018 ರಲ್ಲಿ ವಿವಾಹವಾದರು. ಆದರೆ, ಅವರ ಮದುವೆಯು ತುಂಬಾ ಉಳಿಯಲಿಲ್ಲ. 2021 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಇದಾದ ನಂತರ ಟೀನಾ ದಾಬಿ ಐಎಎಸ್ ಪ್ರದಿವ್ ಗವಾಂಡೆ ಅವರನ್ನು ವಿವಾಹವಾಗಿದ್ದಾರೆ.