ಅಂಬಾನಿ ಅದ್ಧೂರಿ ಮದುವೆ ಸಮಾರಂಭದಲ್ಲಿ ಬಿಟೌನ್‌ ʼಬಂಗಾರದ ಜಿಂಕೆʼ..!

Sat, 13 Jul 2024-9:42 pm,

ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಅನಂತ್ ಅಂಬಾನಿ ಮದುವೆಯಲ್ಲಿ ಗೋಲ್ಡನ್ ಡ್ರೆಸ್‌ನಲ್ಲಿ ಅದ್ಭುತವಾಗಿ ಕಂಗೊಳಿಸಿದರು.  

ಸೌತ್‌ ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ, ಬಾಲಿವುಡ್ ಜಗತ್ತಿನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಟಿ ಶ್ರೀದೇವಿ ಹಿರಿಯ ಮಗಳು ಜಾನ್ವಿ ಕಪೂರ್ ಅಂದಕ್ಕೆ ಸರಿಸಾರಿಟಯೇ ಇಲ್ಲ..  

2018 ರಿಂದ ತಾಯಿಯಂತೆ ಜಾನ್ವಿಯೂ ಸಹ ಬಾಲಿವುಡ್ ಜೊತೆಗೆ ಟಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ..   

ಬಾಲಿವುಡ್ ಚಿತ್ರಗಳಲ್ಲಿ ಮಾತ್ರ ನಟಿಸುತ್ತಿದ್ದ ಜಾನ್ವಿ ಕಪೂರ್, ಜೂನಿಯರ್ ಎನ್ಟಿಆರ್ ಚಿತ್ರದ ಮೂಲಕ ಮೊದಲ ಬಾರಿಗೆ ಸೌತ್‌ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ.  

ಅದೇ ರೀತಿ ಶೀಘ್ರದಲ್ಲೇ ನಟಿ ಜಾನ್ವಿ ಕಪೂರ್ ದಕ್ಷಿಣ ಚಿತ್ರರಂಗದ ಹಲವು ಚಿತ್ರಗಳಲ್ಲಿ ನಟಿಸಲಿದ್ದಾರೆ. ಅಲ್ಲದೆ, ತಮಿಳು ಚಿತ್ರದಲ್ಲಿ ನಟ ಸೂರ್ಯ ಅವರಿಗೆ ಜೋಡಿಯಾಗಿದ್ದಾರೆ ಎನ್ನಲಾಗಿದೆ.  

ಇದೇ ವೇಳೆ, ನಿನ್ನೆ ಜುಲೈ 12 ರಂದು ಆನಂದ್ ಅಂಬಾನಿ ಮತ್ತು ರಾಧಿಕಾ ದಂಪತಿಯ ವಿವಾಹ ನಡೆಯಿತು. ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ನಟಿ ಜಾಹ್ನವಿ ಕಪೂರ್ ಗೋಲ್ಡನ್ ಲೆಹೆಂಗಾವನ್ನು ಧರಿಸಿ ಅದ್ಭುತವಾಗಿ ಕಾಣುತ್ತಿದ್ದರು.  

ಜಾನ್ವಿ ಕಪೂರ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ.. ಅಲ್ಲದೆ, ಚೆಲುವೆಯ ಅಂದ ನೋಡಿದ ನೆಟ್ಟಿಗರು ಈಕೆ ಬಂಗಾರದ ಜಿಂಕೆ ಅಂತ ಹೊಗಳುತ್ತಿದ್ದಾರೆ..  

ಬಂಗಾರ ಬಣ್ಣದ ಲೆಹೆಂಗಾದಲ್ಲಿ ಅಚ್ಚು ಬಂಗಾರದ ಜಿಂಕೆಯಂತೆ ಜಾನ್ವಿ ಕಂಗೊಳಿಸಿದ್ದಾರೆ.. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link