ದೀಪಿಕಾ ಪಡುಕೋಣೆ ತಂಗಿ

  • Sep 11, 2024, 12:15 PM IST
1 /7

ಬಾಲಿವುಡ್ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ ಸೆಪ್ಟೆಂಬರ್‌ 8ರಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ. ಲಕ್ಷ್ಮೀ ಆಗಮನದಿಂದ ಪಡುಕೋಣೆ ಮತ್ತು ಸಿಂಗ್‌ ಕುಟುಂಬದಲ್ಲಿ ಸಂತಸ ಮನೆಮಾಡಿದೆ

2 /7

ಅಂದಹಾಗೆ ನಾವಿಂದು ಈ ವರದಿಯಲ್ಲಿ ದೀಪಿಕಾ ಪಡುಕೋಣೆ ತಂಗಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇವರ ಹಿನ್ನೆಲೆಯೇನು? ಏನು ಮಾಡುತ್ತಿದ್ದಾರೆ? ವಿದ್ಯಾಭ್ಯಾಸವೇನು? ಎಂಬೆಲ್ಲದರ ಬಗ್ಗೆ ತಿಳಿದುಕೊಳ್ಳೋಣ.  

3 /7

ದೀಪಿಕಾ ಪಡುಕೋಣೆ ತಂಗಿ ಹೆಸರು ಅನಿಶಾ ಪಡುಕೋಣೆ. ಇವರು ಹುಟ್ಟಿದ್ದು 2 ಫೆಬ್ರವರಿ 1991 ರಂದು ಬೆಂಗಳೂರಿನಲ್ಲಿ. ಈಗ ಇವರಿಗೆ 33 ವರ್ಷ ವಯಸ್ಸು.  

4 /7

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಅನಿಶಾ ವೃತ್ತಿಪರ ಗಾಲ್ಫ್ ಆಟಗಾರ್ತಿಯಾಗಿದ್ದು, ತಾನು ಹನ್ನೆರಡು ವರ್ಷದವಳಿದ್ದಾಗಲೇ ಈ ಕ್ರೀಡೆಯಲ್ಲಿ ಮಿಂಚಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ, ಟಾಪ್ 10 ರ್ಯಾಂಕಿಂಗ್‌ʼನಲ್ಲೂ ಇದ್ದರು.  

5 /7

ಅನಿಶಾ ಮತ್ತು ದೀಪಿಕಾ ಐದು ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿದ್ದು, ಬಹಳಷ್ಟು ಅನ್ಯೋನ್ಯವಾಗಿದ್ದಾರೆ. ಇನ್ನು ಇವರ ತಂದೆ ಭಾರತದ ಲೆಜೆಂಡಡಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಎಂಬುದು ತಿಳಿದ ವಿಚಾರವೇ.  

6 /7

ಪ್ರಕಾಶ್ ಪಡುಕೋಣೆ ಭಾರತದ ಯಶಸ್ವಿ ಕ್ರೀಡಾ ಪಟು. 1980 ರಲ್ಲಿ ವಿಶ್ವ ನಂ.1 ಶ್ರೇಯಾಂಕವನ್ನು ಪಡೆದ ಈ ದಿಗ್ಗಜ, ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ʼಗಳನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  

7 /7

ಇನ್ನೊಂದೆಡೆ ಅನಿಶಾ ಅವರು ಅಕ್ಕ ದೀಪಿಕಾ ಜೊತೆಗೂಡಿ 2015 ರಲ್ಲಿ ಚಾರಿಟಬಲ್ ಟ್ರಸ್ಟ್ ಲೈವ್ ಲಾಫ್ ಲವ್‌ ಪ್ರಾರಂಭಿಸಿದ್ದಾರೆ.