Janhvi Kapoor: ಶ್ರೀದೇವಿ ಪುತ್ರಿಯ ಹಾಟನೆಸ್‌ ಅಬ್ಬರಕ್ಕೆ ಪಡ್ಡೆಹುಡುಗರ ಎದೆಯಲ್ಲಿ ತಕದಿಮಿತ.. ಪೋಟೋಸ್‌ ವೈರಲ್‌

Tue, 07 Nov 2023-5:18 pm,

ಜಾನ್ವಿ ತೆಲುಗಿನಲ್ಲಿ ಎನ್‌ಟಿಆರ್ ಎದುರು ಎನ್‌ಟಿಆರ್ 30ರಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಜಾನ್ವಿ ಇತ್ತೀಚೆಗೆ ಹೇಳಿದ್ದಾರೆ.   

ದೇವರ  ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಎನ್‌ಟಿಆರ್ ಆರ್‌ಆರ್‌ಆರ್ ನಂತರ ಬುಡಕಟ್ಟು ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

ಜಾನ್ವಿಯ ಸಿನಿಮಾಗಳ ವಿಚಾರಕ್ಕೆ ಬಂದರೆ ಇತ್ತೀಚೆಗಿನ ಮಾತು ಏನೆಂದರೆ ಅವರಿಗೆ ದೇವರ ಜೊತೆಗೆ ಮತ್ತೊಂದು ತೆಲುಗು ಚಿತ್ರದಲ್ಲಿ ಅವಕಾಶ ಸಿಕ್ಕಿದೆ.   

ಜೊತೆಗೆ ಮೆಗಾಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ನಿರ್ದೇಶಕ ಬುಚ್ಚಿ ಬಾಬು ಸೋನಾ ನಿರ್ದೇಶನದಲ್ಲಿ ಚಿತ್ರವೊಂದು ಬರುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ನಾಯಕಿಯಾಗಿ ಜಾನ್ವಿ ಕಪೂರ್ ಅವರನ್ನು ಅಂತಿಮಗೊಳಿಸಲಾಗಿದೆಯಂತೆ.   

ಸದ್ಯ ಜಾನ್ವಿ ಕುರಿತಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುವ ಇವರು ತೆಲುಗಿನಲ್ಲಿ 5 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.   

ಸದ್ಯ ನಟಿ ಜಾನ್ವಿ ಕಪೂರ್‌ ಶೇರ್‌ ಮಾಡಿರುವ ಪೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ   

ZEENEWS TRENDING STORIES

By continuing to use the site, you agree to the use of cookies. You can find out more by Tapping this link