`ನನಗೆ ಬೇಕಿರೋದು ಅಷ್ಟೇ...`: ಅಭಿಷೇಕ್- ಐಶ್ವರ್ಯಾ ಡಿವೋರ್ಸ್ ವದಂತಿ ಮಧ್ಯೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಜಯಾ ಬಚ್ಚನ್ ಶಾಕಿಂಗ್ ಹೇಳಿಕೆ
ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಮುನ್ನೆಲೆಗೆ ಬರುತ್ತಿವೆ. ಇವರಿಬ್ಬರು ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತಿವೆ.
ಕೆಲ ದಿನಗಳಿಂದ ಬಚ್ಚನ್ ಕುಟುಂಬ, ಐಶ್ವರ್ಯಾ ರೈ ಅವರನ್ನು ಕಡೆಗಣಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಇದಕ್ಕೆ ಸಾಕ್ಷಿಯೂ ಸಿಕ್ಕಿತ್ತು. ಈ ವರ್ಷ ಗಣೇಶ ಚತುರ್ಥಿಯಂದು ಐಶ್ವರ್ಯ ರೈ ತನ್ನ ತಾಯಿ ಮತ್ತು ಮಗಳು ಆರಾಧ್ಯ ಬಚ್ಚನ್ ಜೊತೆಗೆ ಗಣೇಶ ದರ್ಶನಕ್ಕೆ ಬಂದಿದ್ದರು. ಆದರೆ ಈ ಸಂದರ್ಭದಲ್ಲಿ ಬಚ್ಚನ್ ಕುಟುಂಬದ ಯಾವುದೇ ಸದಸ್ಯರು ಅವರ ಜೊತೆ ಬಂದಿರಲಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ಜಯಾ ಬಚ್ಚನ್ ಐಶ್ವರ್ಯಾ ರೈ ಬಚ್ಚನ್ ಅವರನ್ನು ಇಷ್ಟಪಟ್ಟಿರಲಿಲ್ಲ. ಆದರೆ ಒಂದೊಮ್ಮೆ ಜಯಾ ಬಚ್ಚನ್, ತನ್ನ ಮತ್ತು ಐಶ್ವರ್ಯಾ ನಡುವಿನ ಕೆಮೆಸ್ಟ್ರಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.
ರೆಡಿಫ್ʼಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಜಯಾ ಬಚ್ಚನ್, "ಐಶ್ವರ್ಯಾ ರೈ ನನ್ನ ಬೆನ್ನ ಹಿಂದೆ ರಾಜಕೀಯ ಮಾಡುವುದಿಲ್ಲ. ಏನು ಹೇಳಬೇಕೋ ಅದನ್ನು ನನ್ನ ಮುಂದೆ ನೇರವಾಗಿ ಹೇಳುತ್ತಾಳೆ. ನಾನೂ ಅಷ್ಟೇ... ಐಶ್ವರ್ಯಾ ವಿಚಾರದಲ್ಲಿ ಏನಾದರು ಅಸಮಾಧಾನ ಬಂದಲ್ಲಿ ನೇರವಾಗಿ ಆಕೆಯ ಬಳಿ ಹೇಳಿಕೊಳ್ಳುತ್ತೇನೆ. ಬೆನ್ನ ಹಿಂದೆ ಮಾತನಾಡುವುದಿಲ್ಲ" ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ಜಯಾ, "ಆಕೆ ಸ್ವಲ್ಪ ನಾಟಕ ಮಾಡುತ್ತಾಳೆ.. ಹಾಗಾದರೂ ಸರಿ, ನನಗೆ ಬೇಕಾಗಿರುವ ಗೌರವ ಐಶ್ವರ್ಯಾ ಕೊಡಬೇಕು" ಎಂದು ಹೇಳಿದ್ದರು. ಸದ್ಯ ಈ ಹೇಳಿಕೆ ವೈರಲ್ ಆಗಿದೆ.
ಒಬ್ಬರಿಗೊಬ್ಬರು ಇಷ್ಟೊಂದು ಅನ್ಯೋನ್ಯವಾಗಿದ್ದರೂ ಸಹ ಬಚ್ಚನ್ ಕುಟುಂಬ ಮತ್ತು ಐಶ್ವರ್ಯಾ ರೈ ನಡುವಿನ ಬಿರುಕು ಯಾವ ಕಾರಣಕ್ಕೆ ಎಂಬುದು ತಿಳಿದುಬಂದಿಲ್ಲ. ಇನ್ನು ವಿಚ್ಚೇದನ ವದಂತಿ ನಿಜವೇ ಎಂಬುದು ಕೂಡ ಸ್ಪಷ್ಟವಾಗಿ ತಿಳಿದುಬರುತ್ತಿಲ್ಲ. ಹಾಗಂತ ಈ ವಿಚಾರದ ಬಗ್ಗೆ ಎರಡೂ ಕುಟುಂಬಗಳು ಯಾವ ಮಾತುಗಳನ್ನೂ ಸಹ ಆಡದಿರುವುದು ಅಭಿಮಾನಿಗಳಲ್ಲಿ ಗೊಂದಲಕ್ಕೀಡುಮಾಡಿದೆ.
ಇನ್ನು ಇತ್ತೀಚಿನ ದಿನಗಳಲ್ಲಂತೂ ಜಯಾ ಬಚ್ಚನ್ ಸೊಸೆ ಐಶ್ವರ್ಯಾ ರೈ ಅವರನ್ನು ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಕೆಲ ವರದಿಗಳ ಅನುಸಾರ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇಬ್ಬರೂ ಕೂಡ ಈ ವರದಿಯನ್ನು ಒಪ್ಪಿಕೊಂಡಿಲ್ಲ. ಹಾಗಂತ ನಿರಾಕರಿಸಿಯೂ ಇಲ್ಲ.