JIO In-Flight Connectivity Plans: Jio ಗ್ರಾಹಕರಿಗೆ ಮೂರು ಜಬರ್ದಸ್ತ್ ಪ್ಲಾನ್ ಬಿಡುಗಡೆ, ವಿಶೇಷತೆ ಇಲ್ಲಿದೆ
1. ಅಂತಾರಾಷ್ಟ್ರೀಯ ಫ್ಲೈಟ್ ಗಳಲ್ಲಿ ನೀವು ಈ ಸೇವೆಯನ್ನು ಬಳಸಬಹುದು - JIO In-Flight Connectivity Plans ಗಳನ್ನು ನೀವು 22 ಅಂತಾರಾಷ್ಟ್ರೀಯ ಫ್ಲೈಟ್ ಗಳಲ್ಲಿ ಬಳಸಬಹುದು. ಈ ಪ್ಲಾನ್ ಗಳಲ್ಲಿ ನಿಮಗೆ ಇಂಟರ್ನೆಟ್ ಹಾಗೂ SMS ಸೌಲಭ್ಯಗಳು ಸಿಗುತ್ತವೆ. ಆದರೆ, ಕಾಲಿಂಗ್ ಸೇವೆಯನ್ನು ಕೇವಲ ಕೆಲವೇ ಏರ್ಲೈನ್ಸ್ ಗಳಲ್ಲಿ ಸಿಗಲಿದೆ. ಈ ಪ್ಲಾನ್ ಗಳ ಕುರಿತು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
2. ರಿಲಯನ್ಸ್ ಜಿಯೋ ರೂ.499 In-Flight Connectivity Plan - 499 ರೂ.ಗಳ ಪ್ಲಾನ್ ಸಿಂಧುತ್ವ ಕೇವಲ 1 ದಿನ ಮಾತ್ರ ಇರಲಿದೆ. ಇದರಲ್ಲಿ ನೀವು 250 MB ಡೇಟಾವನ್ನು ಪಡೆಯುವಿರಿ. ಇದಲ್ಲದೆ, 100 ನಿಮಿಷಗಳು ಮತ್ತು 100 SMS ಗಳು ಲಭ್ಯವಿರುತ್ತವೆ. ಆದರೆ ಒಳಬರುವ ಕರೆಗಳ ಸೌಲಭ್ಯ ಇದರಲ್ಲಿ ಲಭ್ಯವಿಲ್ಲ. ಅಂದರೆ, ಈ ಪ್ಲಾನ್ ಅಡಿಯಲ್ಲಿ ನೀವು ಕೇವಲ ಕರೆಗಳನ್ನು ಮಾತ್ರ ಮಾಡಬಹುದು. ಆದರೆ, ಒಳಬರುವ ಕರೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ.
3. ರಿಲಯನ್ಸ್ ಜಿಯೋ ರೂ.699 In-Flight Connectivity Plan - 699 ರೂ.ಗಳ ಪ್ಲಾನ್ ಸಿಂಧುತ್ವ ಕೂಡ ಕೇವಲ 1 ದಿನ ಮಾತ್ರ ಇರಲಿದೆ. ಇದರಲ್ಲಿ ನೀವು 500 MB ಡೇಟಾವನ್ನು ಪಡೆಯುವಿರಿ. ಇದಲ್ಲದೆ, 100 ನಿಮಿಷಗಳು ಮತ್ತು 100 SMSಗಳು ನಿಮಗೆ ಸಿಗಲಿವೆ. ಈ ಯೋಜನೆಯಲ್ಲಿಯೂ ಕೂಡ ನಿಮಗೆ ಕೇವಲ ಹೊರಹೋಗುವ ಕರೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಒಳಬರುವ ಕರೆಗಳ ಸೌಲಭ್ಯ ಸಿಗುವುದಿಲ್ಲ.
4. ರಿಲಯನ್ಸ್ ಜಿಯೋ ರೂ.999 In-Flight Connectivity Plan - 999 ರೂಗಳ ಈ ಪ್ಲಾನ್‌ನ ಸಿಂಧುತ್ವ ಕೂಡ 1 ದಿನವಾಗಿರಲಿದೆ. ಇದರಲ್ಲಿ ನೀವು 1 GB ಡೇಟಾ, 100 ಹೊರಹೋಗುವ ನಿಮಿಷಗಳ ಕರೆಗಳು ಮತ್ತು 100 SMS ಗಳನ್ನು ಪಡೆಯುತ್ತೀರಿ. ಇದರಲ್ಲಿ ಕೂಡ ಒಳಬರುವ ಕರೆಗಳ ಸೌಲಭ್ಯ ಇರುವುದಿಲ್ಲ.
5. Airline to Airline ಯೋಜನೆಗಳಲ್ಲಿ ಬದಲಾವಣೆ ಇದೆ - ಈ ಯೋಜನೆಗಳನ್ನು ಕೊಳ್ಳುವ ಮೊದಲು ವೈಸ್ ಹಾಗೂ ಡೇಟಾ ಸೌಲಭ್ಯ ಇದೆಯೋ ಅಥವಾ ಇಲ್ಲವೋ ಎಂಬುದನ್ನೊಮ್ಮೆ ಗಮನಿಸಿ. ಯಾವ ಏರ್ಲೈನ್ ಕಂಪನಿಯ ಮುಂದೆ ಆಲ್ ಸರ್ವಿಸ್ ಎಂದು ಸೂಚಿಸಲಾಗಿದೆಯೋ. ಆ ಏರ್ಲೈನ್ ವಿಮಾನಗಳಲ್ಲಿ ನಿಮಗೆ ಡೇಟಾ, ಕಾಲಿಂಗ್ ಹಾಗೂ SMS ಸೌಲಭ್ಯಗಳು ಸಿಗಲಿವೆ. ಇಂಟರ್ನೆಟ್ ಸ್ಪೀಡ್ ಕುರಿತು ಹೇಳುವುದಾದರೆ, ಅದೂ ಕೂಡ Airline to Airline ಭಿನ್ನವಾಗಿರಲಿದೆ.