Jio Recharge Plan: ಜಿಯೋದ ಈ ಯೋಜನೆಯಲ್ಲಿ ಕೇವಲ 75ರೂ.ಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

Sat, 14 Sep 2024-6:43 pm,

ಏರ್‌ಟೆಲ್, ವೋಡಾಫೋನ್ ಐಡಿಯಾ ಟೆಲಿಕಾಂ ಯೋಜನೆಗಳಿಗೆ ಸೆಡ್ಡು ಹೊಡೆದಿರುವ ರಿಲಯನ್ಸ್ ಜಿಯೋ ಅದ್ಭುತವಾದ ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ. 

ವಿಶೇಷವೆಂದರೆ ಜಿಯೋ ಪರಿಚಯಿಸಿರುವ ಈ ರಿಚಾರ್ಜ್ ಪ್ಲಾನ್ ಬೆಲೆ 100 ರೂ.ಗಳಿಗಿಂತಲೂ ಕಡಿಮೆ. 

ಬಳಕೆದಾರರ ಹಿತದೃಷ್ಟಿಯಿಂದ ಹಲವು ಆಗಾಗ್ಗೆ ಕೈಗೆಟುಕುವ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡುವ ರಿಲಯನ್ಸ್ ಜಿಯೋದ ಈ ಪ್ಲಾನ್ ಬಜೆಟ್ ಸ್ನೇಹಿ ಪ್ಲಾನ್ ಅಂತಲೇ ಹೇಳಬಹುದು. 

ರಿಲಯನ್ಸ್ ಜಿಯೋ ಪರಿಚಯಿಸಿರುವ ಈ ರಿಚಾರ್ಜ್ ಪ್ಲಾನ್ ಬೆಲೆ 75 ರೂ. ಮಾತ್ರ. ಇದು 23 ದಿನಗಳ ಮಾನ್ಯತೆಯೊಂದಿಗೆ ಬರುವ ಯೋಜನೆಯಾಗಿದೆ. 

ಜಿಯೋದ 75 ರೂ. ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 2.5 GB ಹೈ ಸ್ಪೀಡ್ ಡೇಟಾ, ನಿತ್ಯ 100 ಎಂಬಿ ಡೇಟಾ ಮತ್ತು  200 ಎಂಬಿ ಪ್ರತ್ಯೇಕ ಡೇಟಾ ಜೊತೆಗೆ ಅನಿಯಮಿತ ಕರೆ ಒಟ್ಟು 50 ಎಸ್ಎಂಎಸ್ ಸೌಲಭ್ಯ ಸಿಗಲಿದೆ. 

ಜಿಯೋದ 75 ರೂ. ಯೋಜನೆಯಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆಯೂ ಲಭ್ಯವಿದೆ. ಆದಾಗ್ಯೂ ಜಿಯೋ ಫೋನ್  (JioPhone) ಬಳಕೆದಾರರು ಮಾತ್ರವೇ ಇದರ ಲಾಭ ಪಡೆಯಬಹುದಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link