Jio Offer: ಜಿಯೋ ಗ್ರಾಹಕರಿಗೆ ಇಲ್ಲಿದೆ ಹಿಂದೆಂದೂ ಸಿಗದ ಬಂಪರ್ ಆಫರ್! ಕೇವಲ 1 ರೂ. ಗೆ ಇಷ್ಟೊಂದು ಲಾಭನಾ?

Tue, 03 Sep 2024-7:00 am,

ಜಿಯೋ ಕಂಪೆನಿ ಒಂದಲ್ಲ ಒಂದು ಬೆಸ್ಟ್ ಆಫರುಗಳನ್ನು ತನ್ನ ಗ್ರಾಹಕರ ಮುಂದೆ ಪರಿಚಯಿಸುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಬಂಪರ್ ಆಫರ್ ಅನ್ನು ಪರಿಚಯಿಸಿದ್ದು ಇದರಲ್ಲಿ ಕೇವಲ 1 ರೂಪಾಯಿಯಲಿ ಎಷ್ಟೆಲ್ಲ ಲಾಭ ಸಿಗಲಿದೆ ನೋಡೋಣ.

ಸದ್ಯ ಪೈಪೋಟಿಯ ಮೇರೆಗೆ ರಿಲಯನ್ಸ್ ಜಿಯೋ ಹಾಗು ವೋಡಾಫೋನ್ - ಐಡಿಯಾ ಕಂಪನಿಗಳು ಒಂದಲ್ಲ ಒಂದು ವಿಶಿಷ್ಟ ರೀತಿಯ ಆಫರುಗಳನ್ನು ಪರಿಚಯಿಸುತ್ತಲೇ ಇದ್ದಾರೆ.

ನೀವೇನಾದರೂ ವಿಶಿಷ್ಟ ಪ್ರಯೋಜನಗಳನ್ನು ಹೊಂದಿರುವ ರೀಚಾರ್ಜ್ ಪ್ಲಾನ್ ಗಳನ್ನು ಹುಡುಕುತ್ತಿದ್ದರೆ. ಅದರಲ್ಲಿಯೂ ನೀವು ಜಿಯೋ ಗ್ರಹಕರಾಗಿದ್ದರೆ 999 ರೂ. ಗಳ ಪ್ಲಾನ್ ಟ್ರೈ ಮಾಡಬಹುದು.

ಈಗಾಗಲೇ ವೋಡಾಫೋನ್ - ಐಡಿಯಾ 998 ರೂ. ಪ್ಲಾನ್ ಅನ್ನು ಜಾರಿಗೆ ತಂದಿದೆ. ಗ್ರಾಹಕರು ಇದರಿಂದ ಹಲವು ಪ್ರಯೋಜನಗಳನ್ನು ಪಡೆಯುತ್ತಿದ್ದು, ಇದಕ್ಕೆ ಸ್ಪರ್ಧೆ ನೀಡಲು ಜಿಯೋ ಕಂಪೆನಿ 999 ರೂ. ಪ್ಲಾನ್ ಅನ್ನು ಗ್ರಾಹಕರ ಬಳಿ ತಂದಿದೆ.

ಇನ್ನೂ ವೋಡಾಫೋನ್ - ಐಡಿಯಾ ಪರಿಚಯಿಸಿರುವ ಈ ಪ್ಲಾನ್ 84 ದಿನಗಳ ವಾಲಿಡಿಟಿ ಒಂದಿದ್ದು, ಇದಕ್ಕೆ ಸ್ಪರ್ಧೆಗಾಗಿ ಜಿಯೋ 98 ದಿನಗಳ ವಾಲಿಡಿಟಿ ನೀಡಲಿದೆ. ಅಂದರೆ ಹಾಗೆ ನೋಡುವುದಾದರೆ ವೋಡಾಫೋನ್ - ಐಡಿಯಾ ಕಂಪೆನಿಗಿಂತ ಜಿಯೋ ಕಂಪೆನಿ 14 ದಿನ ಹೆಚ್ಚು ವಾಲಿಡಿಟಿ ನೀಡಲಿದೆ.

ವೋಡಾಫೋನ್ - ಐಡಿಯಾಗೆ ಹೋಲಿಸಿದರೆ ಕೇವಲ 1 ರುಪಾಯಿ ಹೆಚ್ಚಾಗಿದ್ದು, ಜಿಯೋ ಕಂಪೆನಿ ತಮ್ಮ ಬಳಕೆದಾರರಿಗೆ ದಿನಕ್ಕೆ 2 gb 5G ಡೇಟಾ ಸೇವೆಯನ್ನು ನೀಡುತ್ತಿದೆ.

ಅನ್ಲಿಮಿಟೆಡ್ ಕಾಲ್ಸ್, 100 SMS ಅಷ್ಟೇ ಅಲ್ಲದೆ, ಜಿಯೋ ಗ್ರಾಹಕರು ಜಿಯೋ ಕ್ಲೌಡ್, ಜಿಯೋ ಸಿನೆಮಾ, ಜಿಯೋ ಟಿವಿ ಯಂತಹ ಸೌಲಭ್ಯಗಳನ್ನು ಸಹ ಪಡೆಯ ಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link