Cheapest Postpaid Plan: ಇದೇ ನೋಡಿ ಜಿಯೋದ ಅಗ್ಗದ ಪೋಸ್ಟ್‌ಪೇಯ್ಡ್ ಯೋಜನೆ

Tue, 10 Oct 2023-3:56 pm,

ಜಿಯೋ ತನ್ನ ಬಳಕೆದಾರರಿಗೆ ಹಲವು ಶಕ್ತಿಶಾಲಿ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ನೀವು ನಿಮ್ಮ ಅಗತ್ಯ ಮತ್ತು ಬಜೆಟ್‌ಗೆ ಅನುಗುಣವಾಗಿ ಉತ್ತಮ ಯೋಜನೆಯನ್ನು ಆಯ್ಕೆ ಮಾಡಬಹುದು. ಇವು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತವೆ.   

₹399 ರಿಚಾರ್ಜ್ ಪ್ಲಾನ್  ರಿಲಯನ್ಸ್ ಜಿಯೋ ಕಂಪನಿಯ ಅಗ್ಗದ ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಯಾಗಿದೆ. ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ ನೀವು ಸಾಮಾನ್ಯ ಪ್ರಯೋಜನಗಳೊಂದಿಗೆ ಕೆಲವು ಮನರಂಜನೆ ಪ್ರಯೋಜನಗಳನ್ನು ಕೂಡ ಪಡೆಯಬಹುದು. 

ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ ತಿಂಗಳು ಪೂರ್ತಿ ಅನಿಯಮಿತ ಕರೆಗಳನ್ನು ಆನಂದಿಸುವಿರಿ. ಮಾತ್ರವಲ್ಲ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಅನ್ನು ಸಹ ಪಡೆಯುತ್ತೀರಿ. 

ಈ ರೀಚಾರ್ಜ್ ಪ್ಲಾನ್‌ನಲ್ಲಿ, ನಿಮಗೆ ಒಟ್ಟು 75 GB ಡೇಟಾವನ್ನು ನೀಡಲಾಗುತ್ತದೆ. ಇದನ್ನು ನೀವು ಇಡೀ ತಿಂಗಳು ಬಳಸಬಹುದಾಗಿದೆ. ಒಂದೊಮ್ಮೆ ಈ ಡೇಟಾ ಖಾಲಿಯಾದರೆ ಪ್ರತಿ ಜಿಬಿಗೆ 10 ರೂ. ದರವನ್ನು ಪಾವತಿಸಬೇಕಾಗುತ್ತದೆ. 

ಈ ಯೋಜನೆಯಲ್ಲಿ ಒಟಿಟಿ ಚಂದಾದಾರಿಕೆ ಕೂಡ ಲಭ್ಯವಿದ್ದು, ಈ ಯೋಜನೆಯಲ್ಲಿ ನೀವು ನೆಟ್‌ಫ್ಲಿಕ್ಸ್ ಮೊಬೈಲ್‌ನ ಚಂದಾದಾರಿಕೆ ಮತ್ತು ಅಮೆಜಾನ್ ಪ್ರೈಮ್ ವೀಡಿಯೊದ ಚಂದಾದಾರಿಕೆಯನ್ನು ಪಡೆಯಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link