Jio Cheapest Plans: Disney + Hotstar 84GB ಜೊತೆಗೆ 1 ವರ್ಷ ಉಚಿತ, ಅಗ್ಗದ ಯೋಜನೆ ಬಗ್ಗೆ ತಿಳಿಯಿರಿ

Wed, 24 Nov 2021-12:00 pm,

ಜಿಯೋದ 549 ರೂ. ಯೋಜನೆಯು 56 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ದಿನಕ್ಕೆ 1.5GB ಡೇಟಾ, ಅನಿಯಮಿತ ಕರೆ ಪ್ರಯೋಜನ ಪಡೆಯಬಹುದು. ಹೆಚ್ಚಿನ ವೇಗದ ಡೇಟಾ ಖಾಲಿಯಾದ ನಂತರ ಇಂಟರ್ನೆಟ್ ವೇಗವು 64 Kbps ಆಗಿರುತ್ತದೆ. ಇದರ ಇನ್ನಿತರ ಪ್ರಯೋಜನಗಳ ಕುರಿತು ಹೇಳುವುದಾದರೆ 1 ವರ್ಷಗಳ ಕಾಲ ನೀವು Disney + Hotstar ಮೊಬೈಲ್ ಚಂದಾದಾರಿಕೆ ಮತ್ತು JioTV, JioCinema, JioSecurity ಮತ್ತು JioCloudಗೆ ಉಚಿತ ಪ್ರವೇಶ ಲಭ್ಯವಿದೆ.

500 ರೂ.ಗಿಂತ ಕಡಿಮೆ ಇರುವ ಪ್ಲಾನ್‌ಗಳಲ್ಲಿ ಜಿಯೋದ ಅತ್ಯಂತ ದುಬಾರಿ ಯೋಜನೆ ಇದಾಗಿದೆ. ಇದರಲ್ಲಿ ಬಳಕೆದಾರರು 444 ರೂ. ರಿಚಾರ್ಜ್ ಮಾಡಿಸಿದರೆ ಪ್ರತಿದಿನ 2GB ಇಂಟರ್ನೆಟ್, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ, ದಿನಕ್ಕೆ 100 SMS ಸೌಲಭ್ಯ ಮತ್ತು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಜಿಯೋದ 151 ರೂ. ಯೋಜನೆಯು 30 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯು ಯಾವುದೇ ದೈನಂದಿನ ಡೇಟಾ ಮಿತಿಯೊಂದಿಗೆ ಬರುತ್ತದೆ. ಅಂದರೆ 30GB ಡೇಟಾವನ್ನು ನೀವು ಯಾವುದೇ ಸಮಯದಲ್ಲಿ ಬಳಸಬಹುದು.

ಜಿಯೋದ 201 ರೂ. ಪ್ಲಾನ್‌ನ ವ್ಯಾಲಿಡಿಟಿ 30 ದಿನಗಳವರೆಗೆ ಇರುತ್ತದೆ. ಇದರಲ್ಲಿ ಬಳಕೆದಾರರು 40GB ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯು ಯಾವುದೇ ಡೇಟಾ ಮಿತಿಯನ್ನು ಹೊಂದಿಲ್ಲ. ಅಂದರೆ ನೀವು ಡೇಟಾವನ್ನು ಯಾವುದೇ ಸಮಯದಲ್ಲಿ ಬಳಸಬಹುದು.

ಜಿಯೋದ 251 ರೂ. ಯೋಜನೆಯು 30 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು 50GB ಡೇಟಾವನ್ನು ಪಡೆಯುತ್ತಾರೆ. ಇದನ್ನೂ ಯಾವಾಗ ಬೇಕಾದರೂ ಬಳಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link