41ರ ಹರೆಯದ ಈ ನಟ, ಖುಷ್ಬೂ ಕ್ರಶ್..? ನಯನತಾರಾಗೂ ಇಷ್ಟವಂತೆ ಈತ..! ಯಾರು ಗೊತ್ತಾ?

Sat, 10 Aug 2024-3:27 pm,

ಜೂನಿಯರ್ ಎನ್ಟಿಆರ್ ತೆಲುಗು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ನಟ-ರಾಜಕಾರಣಿ ನಂದಮೂರಿ ಹರಿಕೃಷ್ಣ ಅವರ ಪುತ್ರ. ಬಾಲನಟನಾಗಿ ನಾಯಕನಾಗಿ ಇಂದು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ..   

ʼನಿನ್ನೆ ಚೂಡಾಲನಿʼ ಜೂನಿಯರ್ ಎನ್‌ಟಿಆರ್ ನಟನೆಯ ಮೊದಲ ಚಿತ್ರ. ಮೊದಲ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು.. ಅಲ್ಲದೆ, ಎರಡನೇ ಸಿನಿಮಾ ಸ್ಟೂಡೆಂಟ್ ನಂ.1, ಸುಪ್ಪು, ಆದಿ ಎನ್‌ಟಿಆರ್‌ ಅವರನ್ನ ಸ್ಟಾರ್‌ಗಿರಿ ಗೇರಿಸಿದವು..  

ತೆಲುಗು ಚಿತ್ರಗಳಲ್ಲಿ ಮಾತ್ರ ಸಕ್ರಿಯರಾಗಿದ್ದ ಜೂನಿಯರ್ ಎನ್ಟಿಆರ್, ನಿರ್ದೇಶಕ ರಾಜಮೌಳಿ ನಿರ್ದೇಶನದ 2022 ರ ಚಿತ್ರ 'RRR' ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದರು.  

ಈ ಚಿತ್ರದಲ್ಲಿ ರಾಮ್ ಚರಣ್ ಕೂಡ ನಟಿಸಿದ್ದಾರೆ.. ಈ ಸೂಪರ್‌ ಹಿಟ್‌ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಸ್ವಾತಂತ್ರ್ಯ ಹೋರಾಟಗಾರ ಕೊಮರಂ ಭೀಮ ಪಾತ್ರವನ್ನು ನಿರ್ವಹಿಸಿದ್ದಾರೆ.  

ಈ ಚಿತ್ರವು ಜೂನಿಯರ್ ಎನ್‌ಟಿಆರ್‌ಗೆ ವಿಶ್ವಾದ್ಯಂತ ಕ್ರೇಜ್‌ ನೀಡಿತು.. ಪ್ರಸ್ತುತ ನಟ 'ದೇವರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವು ಶೀರ್ಘ್ರದಲ್ಲೇ ಬಿಡುಗಡೆಯಾಗಲಿದೆ..  

ನಟನೆಯ ಹೊರತಾಗಿ, ಜೂನಿಯರ್ ಎನ್‌ಟಿಆರ್ ಅವರನ್ನು ಎಲ್ಲರೂ ಮೆಚ್ಚುವ ವಿಷಯವೆಂದರೆ ಅವರ ಡಾನ್ಸ್‌.. ಅನೇಕ ನಟಿಯರು ಕೂಡ ಅವರ ಡ್ಯಾನ್ಸ್ ಸ್ಟೆಪ್ ಹುಚ್ಚರಾಗಿದ್ದೇವೆ ಅಂತ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.   

ಅದರಲ್ಲೂ ನಟಿ ಖುಷ್ಬೂ ಜೂನಿಯರ್ ಎನ್‌ಟಿಆರ್ ಅವರ ನೃತ್ಯಕ್ಕೆ ಫಿದಾ ಆಗಿದ್ದು, ಯಂಗ್‌ ಟೈಗರ್‌ ನನ್ನ ಕ್ರಶ್ ಅಂತ ಬಹಿರಂಗಪಡಿಸಿದ್ದರು.   

ಖುಷ್ಬೂ ಅಷ್ಟೇ ಅಲ್ಲದೆ, ನಟಿ ರಂಭಾ, ನಯನತಾರಾ ಮತ್ತು ರಶ್ಮಿಕಾ ಮಂದನಾ ಕೂಡ ಎನ್‌ಟಿಆರ್‌ ತಮ್ಮ ಕ್ರಶ್‌ ಅಂತ ಹೇಳಿಕೊಂಡಿದ್ದರು.  

ಜೂ.ಎನ್‌ಟಿಆರ್‌ ಅಭಿನಯದ ಈ ಚಿತ್ರದಲ್ಲಿ ಬಾಲಿವುಡ್ ನಟ ಸೈಪ್ ಅಲಿ ಖಾನ್, ಜಾನ್ವಿ ಕಪೂರ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಗಮನಾರ್ಹ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link