ಸಲ್ಮಾನ್ ಖಾನ್ ಪತ್ನಿಯಾಗಬೇಕಿತ್ತು ಜೂಹಿ ಚಾವ್ಲಾ! ಈ ಒಂದೇ ಕಾರಣಕ್ಕೆ ನಡೆಯಲಿಲ್ಲ ಮದುವೆ
ಈಗಲೂ ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ಉಳಿದಿದ್ದಾರೆ. ಒಂದು ಕಾಲದಲ್ಲಿ ಸಲ್ಮಾನ್ ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿರುವುದಾಗಿ ಹೇಳಿದ್ದ ಹಳೆಯ ವಿಚಾರವೊಂದು ಈಗ ವೈರಲ್ ಆಗುತ್ತಿದೆ.
ಇತ್ತೀಚೆಗೆ 1990 ರ ಸುಮಾರಿಗೆ ಸಲ್ಮಾನ್ ಖಾನ್ ನೀಡಿದ ಸಂದರ್ಶನದ ವಿಡಿಯೋವೊಂದು ವೈರಲ್ ಆಗಿತ್ತು.
ಇದರಲ್ಲಿ ಜೂಹಿ ತುಂಬಾ ಸ್ವೀಟ್, ಅವಳು ಮುದ್ದಾಗಿದ್ದಾಳೆ. ನಾನು ಅವಳನ್ನು ಮದುವೆಯಾಗುತ್ತೇನೆ ಎಂದು ಅವಳ ತಂದೆಗೆ ಕೇಳಿದ್ದೆ. ಆದರೆ ಅವರು ನಿರಾಕರಿಸಿದರು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಸಲ್ಮಾನ್ ಮತ್ತು ಜೂಹಿ ದೀವಾನಾ ಮಸ್ತಾನಾ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 1997 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಜೂಹಿ ಚಾವ್ಲಾ 1995 ರಲ್ಲಿ ಉದ್ಯಮಿ ಜೈ ಮೆಹ್ತಾ ಅವರನ್ನು ವಿವಾಹವಾದರು. ಜೂಹಿ ಚಾವ್ಲಾ ತಮ್ಮ ವೃತ್ತೀಜೀವನಕ್ಕೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಈ ಮದುವೆ ವಿಚಾರವನ್ನು 6 ವರ್ಷಗಳ ಕಾಲ ಮುಚ್ಚಿಟ್ಟಿದ್ದರು ಎನ್ನಲಾಗುತ್ತದೆ.