Sandalwood: 2300 ಕೋಟಿ ಆಸ್ತಿಯುಳ್ಳ ಉದ್ಯಮಿ ಜೊತೆ ಸ್ಟಾರ್ ನಟಿ 2 ನೇ ಮದುವೆ! 6 ವರ್ಷ ವಿಚಾರ ಗುಟ್ಟಾಗಿ ಇಟ್ಟಿದ್ದ ಈ ಚೆಲುವೆ ಯಾರು?
ಬಾಲಿವುಡ್ ಜಗತ್ತಿನಲ್ಲಿ ಸೌಂದರ್ಯ ಮತ್ತು ನಟನೆಗೆ ಹೆಸರುವಾಸಿಯಾದ ನಟಿ ಜೂಹಿ ಚಾವ್ಲಾ. ಜೂಹಿ ಚಾವ್ಲಾ ಅವರು 1984 ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿದ್ದಾರೆ. 1984 ರಲ್ಲಿ ಮಿಸ್ ಯೂನಿವರ್ಸ್ ಬೆಸ್ಟ್ ಕಾಸ್ಟ್ಯೂಮ್ ಪ್ರಶಸ್ತಿ ಗೆದ್ದಿದ್ದಾರೆ.
ಜೂಹಿ ಚಾವ್ಲಾ1986 ರಲ್ಲಿ ಸುಲ್ತಾನತ್ ಚಿತ್ರದ ಮೂಲಕ ತನ್ನ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಇವರು ಸಿನಿಮಾಗಳ ಜೊತೆ ತಮ್ಮ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಾಗಿದ್ದಾರೆ.
ಜೂಹಿ ಚಾವ್ಲಾ ತನ್ನ ಸಿನಿ ಕರಿಯರ್ ಉತ್ತುಂಗದಲ್ಲಿ ಇರುವಾಗಲೇ, ಐದು ವರ್ಷ ಹಿರಿಯ ಉದ್ಯಮಿ ಜಯ್ ಮೆಹ್ತಾ ಜೊತೆ ಮದುವೆಯದರು. ಆದರೆ ಈ ಮದುವೆಯಾದ ವಿಚಾರವನ್ನು 6 ವರ್ಷ ಮುಚ್ಚಿಟ್ಟಿದ್ದರು. ಜೂಹಿ ಚಾವ್ಲಾ ಪತಿ ಜಯ್ ಮೆಹ್ತಾ ಅವರ ಎರಡನೇ ಪತ್ನಿ.
ಮದುವೆಯಾದರೆ ಸಿನಿರಂಗದಲ್ಲಿ ಬೇಡಿಕೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಜೂಹಿ ಚಾವ್ಲಾ ಈ ವಿಚಾರವನ್ನು ಮುಚ್ಚಿಟ್ಟಿದ್ದರು ಎನ್ನಲಾಗುತ್ತದೆ.
ಆದರೆ 6 ವರ್ಷಗಳ ಬಳಿಕ ಈ ಸಂಗತಿ ಹೊರ ಬಿದ್ದಾಗ ಎಲ್ಲರೂ ಶಾಕ್ ಆದರು. ಬಾಲಿವುಡ್‌ನಲ್ಲಿ ಅವರ ಬೇಡಿಕೆಯೂ ಕಡಿಮೆಯಾಗುತ್ತ ಸಾಗಿತು.
ಜಯ್ ಮೆಹ್ತಾ ‘ದಿ ಮೆಹ್ತಾ ಗ್ರೂಪ್’ ಸ್ಥಾಪಕರಾಗಿದ್ದಾರೆ. 4162 ಕೋಟಿ ರೂಪಾಯಿ ಮೌಲ್ಯದ ಕಂಪನಿ ಇದಾಗಿದೆ. ವಿಶ್ವಾದ್ಯಂತ 15,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಈ ಸಂಸ್ಥೆ ಹೊಂದಿದೆ.